ನವದೆಹಲಿ: 2019ರಲ್ಲಿ ನಡೆದಿದ್ದ ಪುಲ್ವಾಮಾ ದಾಳಿಯ ರೂವಾರಿಗಳಲ್ಲೊಬ್ಬನಾಗಿದ್ದ ಸಮೀರ್ ಅಹ್ಮದ್ ದಾರ್, ಇನ್ನೂ ಜೀವಂತವಾಗಿದ್ದಾನೆ ಎಂಬ ಸ್ಫೋಟಕ ಅಂಶವೊಂದನ್ನು ಭಾರತೀಯ ಗುಪ್ತಚರ ಇಲಾಖೆಯ ಕೆಲ ಅಧಿಕಾರಿಗಳು ತಿಳಿಸಿದ್ದಾರೆ.
ಜು. 31ರಂದು ಪುಲ್ವಾಮಾದ ನಾಗ್‌ಬೆರೆನ್- ತರ್ಸಾರ್ ಪ್ರಾಂತ್ಯದಲ್ಲಿ, ಮೇಜರ್ ಜನರಲ್ ರಶೀಂ ಬಾಲಿ ನೇತೃತ್ವದ ವಿಕ್ಟರ್ ಪಡೆ ಹಾಗೂ ಜೈಷ್-ಎ-ಮೊಹಮ್ಮದ್ ಉಗ್ರರ ನಡುವೆ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಸಮೀರ್ ದಾರ್ ಹಾಗೂ ಮತ್ತೊಬ್ಬ ಕುಖ್ಯಾತ ಉಗ್ರ, ಜೈಷ್ ಕಮಾಂಡರ್ ಮೊಹಮ್ಮದ್ ಇಸ್ಮಾಯಿಲ್ ಅಲ್ವಿ ಅಲಿಯಾಸ್ ಲಂಬು ಹತರಾಗಿದ್ದಾರೆಂದು ಹೇಳಲಾಗಿತ್ತು.
ಆದರೆ, ಸಮೀರ್ ಎಂದು ಕೊಂಡಾತನ ಮೃತದೇಹವನ್ನು ನಿಜವಾದ ಸಮೀರ್‌ನ ಕುಟುಂಬಕ್ಕೆ ಹಸ್ತಾಂತರಿಸಿದಾಗ ಅವರು ಅದು ಸಮೀರ್‌ನ ದೇಹವಲ್ಲ ಎಂದು ಖಚಿತಪಡಿಸಿದ್ದರು.
ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 1224 ಹೊಸ ಪ್ರಕರಣ ಪತ್ತೆ| 1668 ಸೋಂಕಿತರು ಗುಣಮುಖ
ಇನ್ನು, ಸಮೀರ್‌ನ ಫೋಟೋಕ್ಕೂ ಕಾರ್ಯಾಚರಣೆಯಲ್ಲಿ ಸತ್ತವನ ದೇಹಕ್ಕೂ ತಾಳೆಯಾಗಿರಲಿಲ್ಲ. ಹಾಗಾಗಿ, ಈ ದಾರ್ ಇನ್ನೂ ಜೀವಂತವಾಗಿರುವುದು ಖಾತ್ರಿಯಾಗಿದೆ. ಆತ, ಕಾಶ್ಮೀರದಲ್ಲಿದ್ದುಕೊಂಡೇ ಹಲವಾರು ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.