Advertisement

Azam Cheema: 26/11 ಮುಂಬೈ ದಾಳಿಯ ಪ್ರಮುಖ ಸಂಚುಕೋರ ಪಾಕ್‌ನಲ್ಲಿ ನಿಧನ… ಮೂಲಗಳು

11:14 AM Mar 02, 2024 | Team Udayavani |

ನವದೆಹಲಿ: ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಗುಂಪಿನ ಹಿರಿಯ ಕಮಾಂಡರ್ ಮತ್ತು 2008 ರ ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಸಂಚುಕೋರ ಅಜಮ್ ಚೀಮಾ ಪಾಕಿಸ್ತಾನದ ಫೈಸಲಾಬಾದ್ ನಗರದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ.

Advertisement

2006ರಲ್ಲಿ ಮುಂಬೈನಲ್ಲಿ ನಡೆದ ರೈಲು ಬಾಂಬ್ ಸ್ಫೋಟದಲ್ಲಿ 188 ಮಂದಿ ಸಾವಿಗೀಡಾಗಿ ಮತ್ತು 800ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆಯ ಮಾಸ್ಟರ್ ಮೈಂಡ್ ಕೂಡ ಚೀಮಾ ಆಗಿದ್ದ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.

ಇತ್ತೀಚೀನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಲಷ್ಕರ್‌ನ ಹಲವು ಉಗ್ರರು ನಿಗೂಢವಾಗಿ ಸಾವನ್ನಪ್ಪಿದ್ದು, ಪಾಕಿಸ್ತಾನವನ್ನು ಬೆಚ್ಚಿ ಬೀಳಿಸಿದೆ. ಅಲ್ಲದೆ ಈ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕ್ ಆರೋಪಿಸಿತ್ತು ಆದರೆ ಪಾಕ್ ನ ಆರೋಪವನ್ನು ಭಾರತ ತಳ್ಳಿ ಹಾಕಿದೆ.

2008ರಂದು ಮುಂಬೈಯಲ್ಲಿ ನಡ ದಾಳಿಯಲ್ಲಿ ಅಮೆರಿಕನ್ನರು ಸೇರಿದಂತೆ ಒಟ್ಟು 166 ಜನರ ಸಾವಿಗೆ ಕಾರಣರಾದ ಭಯೋತ್ಪಾದಕರಿಗೆ ಚೀಮಾ ತರಬೇತಿ ನೀಡಿದ್ದಕ್ಕಾಗಿ ಈತ ಅಮೆರಿಕ್ಕೂ ಬೇಕಾದ ವ್ಯಕ್ತಿಯಾಗಿದ್ದ.

ಚೀಮಾ ಅಂತ್ಯಕ್ರಿಯೆಯನ್ನು ಫೈಸಲಾಬಾದ್‌ನ ಮಲ್ಖಾನ್‌ವಾಲಾದಲ್ಲಿ ನಡೆಸಲಾಗಿದೆ ಎಂದು ಹೇಳಲಾಗಿದೆ.

Advertisement

ಇದನ್ನೂ ಓದಿ: Marathi Actress: ಮರಾಠಿ ನಟಿ ಕೇತಕಿ ಚಿತಾಲೆ ವಿರುದ್ಧ ಪ್ರಕರಣ ದಾಖಲು… ಏನಿದು ಪ್ರಕರಣ

Advertisement

Udayavani is now on Telegram. Click here to join our channel and stay updated with the latest news.

Next