ವಾಷಿಂಗ್ಟನ್: ಖಿನ್ನತೆ, ಛಿದ್ರಮನಸ್ಕತೆ ಮುಂತಾದ ಮನೋವ್ಯಾಧಿಗಳಿಗೆ ಅರಿವಳಿಕೆ ಔಷಧ “ಕೆಟಮಿನ್’ ರಾಮಬಾಣವಾಗಲಿದೆಯೇ? ಅಮೆರಿಕದ ವಿಸ್ಕನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನವು ಇಂಥದ್ದೊಂದು ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಸಾಮಾನ್ಯವಾಗಿ ಊಹೆಗಳು ನಮ್ಮ ವರ್ತನೆಯನ್ನು ಬದಲಾಯಿಸುತ್ತವೆ. ಬೊಗಳುವ ಶಬ್ದ ಕೇಳಿದೊಡನೆ, ನಮ್ಮ ಕಣ್ಣಮುಂದೆ ನಾಯಿಯ ಆಕೃತಿ ಕಾಣಿಸುತ್ತದೆ. ಮಾನವನ ಮೆದುಳು ಕಾರ್ಯನಿರ್ವಹಿಸುವ ಬಗೆಯೇ ಹೀಗೆ.
ಊಹೆಯು ಹೇಗೆ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಅರಿಯಲು 32 ಮಂದಿಯ ಮೇಲೆ ಅಧ್ಯಯನ ನಡೆಸಲಾಗಿದೆ. ನಂತರ, ಅರಿವಳಿಕೆ ಔಷಧವಾದ ಕೆಟಮಿನ್ ಡೋಸ್ ಅನ್ನು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಅವರಿಗೆ ನೀಡಿದಾಗ, ಅವರ ಊಹೆಯ ಮಟ್ಟ ಹೇಗೆ ಬದಲಾಗುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ.
ಇದನ್ನೂ ಓದಿ:ಅಕ್ರಮ ಸ್ಪಾಗಳ ಮೇಲೆ ಸಿಸಿಬಿ ದಾಳಿ : ಇಬ್ಬರ ಬಂಧನ, 13 ಮಹಿಳೆಯರ ರಕ್ಷಣೆ
ಖಿನ್ನತೆ ಮತ್ತು ಸ್ಕಿಝೋಫ್ರೆನಿಯಾ ಸೇರಿದಂತೆ ಕೆಲವು ಮಾನಸಿಕ ಕಾಯಿಲೆಗಳು ಇರುವವರಲ್ಲಿ ಊಹೆಯ ಸಾಮರ್ಥ್ಯ ತಗ್ಗಿರುತ್ತದೆ. ಹೀಗಾಗಿ, ತಮಗೇನೋ ಕೆಟ್ಟದಾಗುತ್ತದೆ ಅಥವಾ ಅನಾಹುತವೊಂದು ನಡೆಯುತ್ತದೆ ಎಂಬಂಥ ಭ್ರಮೆ ಅವರನ್ನು ಆವರಿಸಿರುತ್ತದೆ. ಇಂತಹ ಬ್ರಾಂತಿಯಿಂದ ಅವರನ್ನು ಹೊರತರಲು, ಖಿನ್ನತೆಯನ್ನು ಉಪಶಮನಗೊಳಿಸಲು ಈ ಕೆಟಮಿನ್ ಅನ್ನು ಬಳಸಬಹುದು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಖಿನ್ನತೆಯುಳ್ಳ ರೋಗಿಗಳಲ್ಲಿನ ನೆಗೆಟಿವ್ ಊಹೆಗಳನ್ನು ಬ್ಲಾಕ್ ಮಾಡುವಲ್ಲಿ ಕೆಟಮಿನ್ ಪ್ರಮುಖ ಪಾತ್ರ ವಹಿಸಲಿದೆ ಎನ್ನುತ್ತಾರೆ ಮ್ಯಾಡಿಸನ್ ವಿವಿಯ ಪ್ರೊಫೆಸರ್ ಯೂರಿ ಸಾಲ್ಮನ್.