ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ಕೇಶವ ಜೋಗಿತ್ತಾಯ(88) ಮೇ 24 ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ತನ್ನೀರುಪಂಥ ಬಂಗಾಲಾಯಿಯವರಾದ ಅವರು ಸುಬ್ರಹ್ಮಣ್ಯ ದೇಗುಲದಲ್ಲಿ ಪ್ರಧಾನ ಅರ್ಚಕರಾಗಿ 50 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಜೋತಿಷ ಶಾಸ್ತ್ರ ಪರಿಣಿತರಾಗಿದ್ದು ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರ ಭವಿಷ್ಯ ಹೇಳಿದ ಪ್ರಕಾರ ನಡೆದಿದ್ದು, ಅವರ ಕಾಲದಲ್ಲೇ ನಿವೃತ್ತಿಯ ಅನಂತರ ಕ್ಷೇತ್ರದ ಸೇವೆಗೆ ನಿಯುಕ್ತಿಗೊಳಿಸಿದ್ದರು.
ಕುಕ್ಕೆ ದೇಗುಲದ ಬ್ರಹ್ಮಕಲಶ ಅವರು ಪ್ರಧಾನ ಅರ್ಚಕರಾಗಿದ್ದ ಅವಧಿಯಲ್ಲೇ ನಡೆದಿತ್ತು. ಸಚಿನ್ ತೆಂಡೂಲ್ಕರ್ ಸಹಿತ ದೇಶ ವಿದೇಶದ ವಿವಿಧ ರಂಗದವರು, ಬಾಲಿವುಡ್, ಹಾಲಿವುಡ್ ತಾರೆಯರು ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಇವರು ಕಾರಣರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.
Related Articles
ಇದನ್ನೂ ಓದಿ : ವಿಧಾನ ಪರಿಷತ್ ಚುನಾವಣೆ: ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎ.ಶರವಣ ನಾಮಪತ್ರ