Advertisement

ಪತ್ರಿಕಾ ಭವನಕ್ಕೆ ಜಾಗ ನೀಡಿ

05:24 PM Feb 07, 2021 | Team Udayavani |

ಕೆರೂರ: ಸ್ಥಳೀಯ ಪತ್ರಕರ್ತರ ಹಲವು ದಿನಗಳ ಬೇಡಿಕೆ ಈಡೇರಿಸಲು ಬದ್ಧರಾಗಿದ್ದು ಪಟ್ಟಣದಲ್ಲಿ ಪತ್ರಿಕಾ ಸದಸ್ಯರ ಅನುಕೂಲಕ್ಕೆ ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಬದ್ಧರಾಗಿದ್ದೇವೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ತಿಮ್ಮಾಪುರ, ಉಪಾಧ್ಯಕ್ಷ ವಿಜಯ ಕುಮಾರ ಐಹೊಳ್ಳಿ ಹೇಳಿದರು.

Advertisement

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಸ್ಥಳೀಯ ಪತ್ರಕರ್ತರು ಪತ್ರಿಕಾ ಭವನ ನಿರ್ಮಾಣಕ್ಕೆ ಸೂಕ್ತ ಸ್ಥಳ (ನಿವೇಶನ) ಒದಗಿಸುವಂತೆ ನೀಡಿದ ಮನವಿ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು. ಸರ್ಕಾರದ ನಿರ್ದೇಶನದಂತೆ ಈಗಾಗಲೇ ಪಟ್ಟಣದ ಕೆಲವು ಪ್ರಮುಖ ಸ್ಥಳಗಳಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣದ ಪ್ರಸ್ತಾಪವಿದ್ದು, ಅವುಗಳ ಮೊದಲ ಮಹಡಿಯಲ್ಲಿ ಇಲ್ಲವೇ ಇತರೆ ಬೇರೆ ಪ್ರದೇಶದಲ್ಲಿ ಖಾಲಿ ಜಾಗೆ ಗುರುತಿಸಿ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ,ಈ ಮನವಿ ಬಗೆಗೆ ಸಾಮಾನ್ಯ ಸಭೆಯಲ್ಲಿ ಸೂಕ್ತ ನಿರ್ಧಾರದ ಬಳಿಕ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಪರ್ಯಾಯವಾಗಿ ಪಪಂ ವಾಣಿಜ್ಯ ಮಳಿಗೆ ಮೇಲೆ ಪತ್ರಿಕಾ ಭವನ ನಿರ್ಮಾಣಕ್ಕೆ ಅವಕಾಶವಿದ್ದರೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

1 ಲ.ರೂ ದೇಣಿಗೆ: ಈಚೆಗೆ ಕೆರೂರಿಗೆ ಭೇಟಿ ನೀಡಿದ್ದ ಚಾಮರಾಜಪೇಟೆ ಶಾಸಕ ಜಮೀರ್‌ ಅಹ್ಮದಖಾನ್‌ ಅವರು, ಪತ್ರಿಕಾ ಭವನ ನಿರ್ಮಾಣಕ್ಕೆ 1 ಲ.ರೂ ದೇಣಿಗೆ ನೀಡಿದ್ದು, ಇದೇ ವೇಳೆ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.

 ಇದನ್ನೂ ಓದಿ :ಶರತ್‌ ಕೃಷ್ಣಮೂರ್ತಿ ಭಾರತ್‌ ಸ್ಕೌಟ್ಸ್‌-ಗೈಡ್ಸ್‌ ಅಧ್ಯಕ್ಷ

Advertisement

ಪಪಂ ಸದಸ್ಯ ವಿಠ್ಠಲಗೌಡ ಗೌಡರ, ರಾಚಪ್ಪ ಶೆಟ್ಟರ, ಶಂಕರ ಕೆಂಧೂಳಿ, ಮೋದಿನಸಾಬ ಚಿಕ್ಕೂರ, ಮುಖಂಡ ಸುರೇಶ ಪೂಜೇರಿ, ಮಲ್ಲಪ್ಪ ಹಡಪದ, ಯಾಸೀನ ಖಾಜಿ, ಪ್ರಮೋದ ಪೂಜಾರ, ನಾಗೇಶ ಛತ್ರಬಾನ, ರಾಜು ಚೋರಗಸ್ತಿಇತರರು ಇದ್ದರು. ಪತ್ರಕರ್ತರಾದ ರಾಘವೇಂದ್ರ ಕಲಾದಗಿ, ಅಬೂಬಕರ ಯಡಹಳ್ಳಿ, ಪ್ರಭು ಲಕ್ಷೆಟ್ಟಿ, ಶ್ರೀಧರ ಚಂದರಗಿ, ಭೀಮಸೇನ ದೇಸಾಯಿ, ಮಹಾಂತೇಶ ಅಂಬಿಗೇರ, ಮಹಾಂತೇಶ ಕಾಳಗಿ, ಜೆ.ವಿ. ಕೆರೂರ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next