Advertisement

ಪ್ರಚಾರದ ಬಿಸಿಗೆ ತೆರೆ : ನಾಳೆ ಕೇರಳ, ತಮಿಳುನಾಡು, ಪುದುಚೇರಿಗಳಲ್ಲಿ ಮತದಾನ

07:15 AM Apr 05, 2021 | Team Udayavani |

ಹೊಸದಿಲ್ಲಿ: ಬಿಸಿಲಿನ ಬೇಗೆಯ ನಡುವೆ ದಕ್ಷಿಣದ ರಾಜ್ಯಗಳಲ್ಲಿ ಬಹಿರಂಗ ಪ್ರಚಾರಕ್ಕೆ ರವಿವಾರ ತೆರೆಬಿದ್ದಿದೆ. ಮಂಗಳವಾರ, ಎ. 6ರಂದು ಕೇರಳ, ತಮಿಳುನಾಡು, ಪುದುಚೇರಿಗಳಲ್ಲಿ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಲ ಮಂಗಳವಾರ 3ನೇ ಹಂತ ಮತ್ತು ಅಸ್ಸಾಂ ಕೊನೆಯ ಹಂತದ ಮತದಾನಕ್ಕೆ ಸಾಕ್ಷಿಯಾಗಲಿದ್ದು, ಅಲ್ಲೂ ಪ್ರಚಾರಕ್ಕೆ ಪೂರ್ಣವಿರಾಮ ಬಿದ್ದಿದೆ.

Advertisement

ಎರಡೆಲೆಯೋ, ಸೂರ್ಯನೋ?
ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ಹ್ಯಾಟ್ರಿಕ್‌ ಗೆಲುವಿನ ಕನಸು ಕಾಣುತ್ತಿದ್ದರೆ, ವಿಪಕ್ಷ ಡಿಎಂಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಶ್ರಮಿಸುತ್ತಿದೆ. ಜಯಲಲಿತಾ ಮತ್ತು ಕರುಣಾನಿಧಿಯಂಥ ದಿಗ್ಗಜ ನಾಯಕರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಎರಡೂ ಪಕ್ಷಗಳಿಗೆ ಅಗ್ನಿಪರೀಕ್ಷೆಯಾಗಿದೆ.

ಕೇರಳದಲ್ಲಿ ರ‍್ಯಾಲಿ, ರೋಡ್‌ ಶೋ
– ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ರವಿವಾರ ಉತ್ತರ ಕಲ್ಲಿಕೋಟೆ, ನೆಮಾಮ್‌ನಲ್ಲಿ ಪ್ರಚಾರ ನಡೆಸಿದ್ದಾರೆ.
– ಸಿಎಂ ಪಿಣರಾಯಿ ಸ್ವಕ್ಷೇತ್ರ ಕಣ್ಣೂರಿನ ಧರ್ಮ ದಾಮ್‌ನಲ್ಲಿ , ಕಾಂಗ್ರೆಸ್‌ ನಾಯಕ ರಮೇಶ್‌ ಚೆನ್ನಿತ್ತಲ ನೆಡುಂಕದಂನಲ್ಲಿ ರೋಡ್‌ಶೋ ನಡೆಸಿದ್ದಾರೆ.
– ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿರುವನಂತಪುರಂ ಮತ್ತು ತಿರುವಳ್ಳದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ.

ಬಂಗಾಲ ಕಾಳಗ
ಪ. ಬಂಗಾಲದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಚಾರ ಕೈಗೊಂಡರು. ಹೂಗ್ಲಿಯಲ್ಲಿ ಮಮತಾ ಬ್ಯಾನರ್ಜಿ ಕೊನೆಯ ಹಂತದ ಮತಯಾಚನೆ ನಡೆಸಿದರು.

ಅಸ್ಸಾಂನಲ್ಲಿ ಶಾ
ಅಸ್ಸಾಂನಲ್ಲಿ ರ್ಯಾಲಿ ನಡೆಸಿದ ಅಮಿತ್‌ ಶಾ, ರಾಜ್ಯದ ಅಭಿವೃದ್ಧಿ ಕುರಿತು ಕಾಂಗ್ರೆಸ್‌ಗೆ ಯಾವುದೇ ಅಜೆಂಡಾ ಇಲ್ಲ ಎಂದು ವಾಗ್ಧಾಳಿ ಸಂಘಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next