ಕಾಸರಗೋಡು: ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಮತ್ತು ಅಲ್ ಖೈದಾ ಭಯೋತ್ಪಾದಕ ಸಂಘಟನೆಗಳ ಸ್ಲೀಪರ್ ಸೆಲ್ ಕೇರಳದಲ್ಲಿ ಈಗಲೂ ಸಕ್ರಿಯವಾಗಿದೆ ಎಂಬ ಆಘಾತಕಾರಿ ಅಂಶವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪತ್ತೆಹಚ್ಚಿದೆ.
ಐಎಸ್ ಕೇರಳದಲ್ಲಿ ಮಲಯಾಳ ಟೆಲಿಗ್ರಾಂ ಚಾನೆಲ್ ಹೊಂದಿದೆ. ಆ ಚಾನೆಲ್ ನ ಹಿಂದೆ ಕೇರಳದ ಉಗ್ರಗಾಮಿ ಸಂಘಟನೆಯೊಂದರ ಕೈವಾಡವಿದೆಯೆಂಬ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ವಿಸ್ತೃತವಾದ ತನಿಖೆಯನ್ನು ಆರಂಭಿಸಿದ್ದಾರೆ.
ಕೇರಳದಲ್ಲಿ ಕೋಮು ಹಿಂಸಾಚಾರ ನಡೆಸುವುದೇ ಐಎಸ್ ನ ಪ್ರಮುಖ ಉದ್ದೇಶವಾಗಿದ್ದು, ಇದಕ್ಕೆ ಪೂರಕವಾಗಿ ಟೆಲಿಗ್ರಾಂ ಚಾನೆಲ್ ಆರಂಭಿಸಾಲಗಿದೆ. ಇದರ ಮೂಲಕ ಐಎಸ್ ಬೆಂಬಲಿಗರನ್ನು ಒಗ್ಗೂಡಿಸುವುದು ಹಾಗೂ ಅದನ್ನು ಬಳಸಿಕೊಂಡು ದೇಶಾದ್ಯಂತ ಗಲಭೆ ಸೃಷ್ಟಿಸುವುದು ಈ ಐಎಸ್ ಸಂಘಟನೆಯ ಉದ್ದೇಶವಾಗಿದೆ. ಹಾಗಾಗಿ ಇಂಥ ಸ್ಲಿàಪರ್ ಸೆಲ್‌ಗಳನ್ನು ಸ್ಥಾಪಿಸಲಾಗಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಇದಲ್ಲದೇ, ಇನ್ನೊಂದು ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಅಲ್ ಖೈದಾದೊಂದಿಗೂ ಈ ಸ್ಲಿàಪರ್ ಸೆಲ್ ನಿಕಟ ಸಂಬಂಧ ಹೊಂದಿದ್ದು, ತುರ್ಕಿಯ ಫೌಂಡೇಶನ್ ಫಾರ್ ಹ್ಯೂಮನ್ ರೈಟ್ಸ್ ಆ್ಯಂಡ್ ಹ್ಯುಮಾನಿಟೇರಿಯನ್ ರಿಲೀಫ್(ಐಎಚ್‌ಎಚ್)ನೊಂದಿಗೂ ನಂಟು ಹೊಂದಿದೆ ಎನ್ನಲಾಗಿದೆ. ಇವೆಲ್ಲದರ ಸಹಯೋಗದಲ್ಲಿ ಕೇರಳದಲ್ಲಿ ಸ್ಲಿàಪರ್ ಸೆಲ್ ಸದ್ದಿಲ್ಲದೇ ಕಾರ್ಯ ನಿರ್ವಹಿಸುತ್ತಿರುವ ಕುರಿತು ಸ್ಪಷ್ಟ ಮಾಹಿತಿ ಎನ್‌ಐಎಗೆ ಲಭಿಸಿದೆ ಎನ್ನಲಾಗಿದೆ.