Advertisement

ಕೇರಳದಲ್ಲಿ ಐಎಸ್‌, ಅಲ್‌ ಖೈದಾಗಳ ಸ್ಲೀಪರ್ ಸೆಲ್‌ ಸಕ್ರಿಯ: ಎನ್‌ಐಎ

08:40 AM Jan 11, 2023 | Team Udayavani |

ಕಾಸರಗೋಡು: ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಮತ್ತು ಅಲ್‌ ಖೈದಾ ಭಯೋತ್ಪಾದಕ ಸಂಘಟನೆಗಳ ಸ್ಲೀಪರ್ ಸೆಲ್‌ ಕೇರಳದಲ್ಲಿ ಈಗಲೂ ಸಕ್ರಿಯವಾಗಿದೆ ಎಂಬ ಆಘಾತಕಾರಿ ಅಂಶವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪತ್ತೆಹಚ್ಚಿದೆ.

Advertisement

ಐಎಸ್‌ ಕೇರಳದಲ್ಲಿ ಮಲಯಾಳ ಟೆಲಿಗ್ರಾಂ ಚಾನೆಲ್‌ ಹೊಂದಿದೆ. ಆ ಚಾನೆಲ್‌ ನ ಹಿಂದೆ ಕೇರಳದ ಉಗ್ರಗಾಮಿ ಸಂಘಟನೆಯೊಂದರ ಕೈವಾಡವಿದೆಯೆಂಬ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ವಿಸ್ತೃತವಾದ ತನಿಖೆಯನ್ನು ಆರಂಭಿಸಿದ್ದಾರೆ.

ಕೇರಳದಲ್ಲಿ ಕೋಮು ಹಿಂಸಾಚಾರ ನಡೆಸುವುದೇ ಐಎಸ್‌ ನ ಪ್ರಮುಖ ಉದ್ದೇಶವಾಗಿದ್ದು, ಇದಕ್ಕೆ ಪೂರಕವಾಗಿ ಟೆಲಿಗ್ರಾಂ ಚಾನೆಲ್‌ ಆರಂಭಿಸಾಲಗಿದೆ. ಇದರ ಮೂಲಕ ಐಎಸ್‌ ಬೆಂಬಲಿಗರನ್ನು ಒಗ್ಗೂಡಿಸುವುದು ಹಾಗೂ ಅದನ್ನು ಬಳಸಿಕೊಂಡು ದೇಶಾದ್ಯಂತ ಗಲಭೆ ಸೃಷ್ಟಿಸುವುದು ಈ ಐಎಸ್‌ ಸಂಘಟನೆಯ ಉದ್ದೇಶವಾಗಿದೆ. ಹಾಗಾಗಿ ಇಂಥ ಸ್ಲಿàಪರ್‌ ಸೆಲ್‌ಗ‌ಳನ್ನು ಸ್ಥಾಪಿಸಲಾಗಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಇದಲ್ಲದೇ, ಇನ್ನೊಂದು ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಅಲ್‌ ಖೈದಾದೊಂದಿಗೂ ಈ ಸ್ಲಿàಪರ್‌ ಸೆಲ್‌ ನಿಕಟ ಸಂಬಂಧ ಹೊಂದಿದ್ದು, ತುರ್ಕಿಯ ಫೌಂಡೇಶನ್‌ ಫಾರ್‌ ಹ್ಯೂಮನ್‌ ರೈಟ್ಸ್‌ ಆ್ಯಂಡ್‌ ಹ್ಯುಮಾನಿಟೇರಿಯನ್‌ ರಿಲೀಫ್‌(ಐಎಚ್‌ಎಚ್‌)ನೊಂದಿಗೂ ನಂಟು ಹೊಂದಿದೆ ಎನ್ನಲಾಗಿದೆ. ಇವೆಲ್ಲದರ ಸಹಯೋಗದಲ್ಲಿ ಕೇರಳದಲ್ಲಿ ಸ್ಲಿàಪರ್‌ ಸೆಲ್‌ ಸದ್ದಿಲ್ಲದೇ ಕಾರ್ಯ ನಿರ್ವಹಿಸುತ್ತಿರುವ ಕುರಿತು ಸ್ಪಷ್ಟ ಮಾಹಿತಿ ಎನ್‌ಐಎಗೆ ಲಭಿಸಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next