ಮಲಪ್ಪುರಂ: ಶಾಲೆಯ ಆವರಣಕ್ಕೆ ಲೆಗಿಂಗ್ಸ್ ಧರಿಸಿ ಬಂದಿರುವುದು ಏಕೆ ಎಂಬ ಕಾರಣಕ್ಕಾಗಿ ತನಗೆ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಶಿಕ್ಷಕಿಯೊಬ್ಬರು ಪ್ರಾಂಶುಪಾಲರ ವಿರುದ್ಧ ಆರೋಪ ಹೊರಿಸಿದ್ದಾರೆ.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪ್ರಾಂಶುಪಾಲರ ಕಚೇರಿಯಲ್ಲಿ ಇರುವ ಹಾಜರಿ ರಿಜಿಸ್ಟರ್ನಲ್ಲಿ ಶಿಕ್ಷಕಿ ಸಹಿ ಮಾಡಲು ಹೋಗಿದ್ದಾಗ ಶಿಕ್ಷಕಿಯೇ ಲೆಗಿಂಗ್ಸ್ ಹಾಕಿಕೊಂಡು ಶಾಲೆಗೆ ಬಂದರೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ಧರಿಸಿ ಬನ್ನಿ ಎಂದು ಹೇಳುವ ನೈತಿಕತೆ ಇರುತ್ತದೆಯೇ ಎಂದು ಅವರು ಪ್ರಶ್ನಿಸಿದ್ದರು ಎಂದು ಹೇಳಲಾಗಿದೆ.
ಇದರಿಂದ ತಮಗೆ ಆಘಾತವಾಗಿದೆ ಎಂದು ಶಿಕ್ಷಕಿ ದೂರಿದ್ದಾರೆ. ಜತೆಗೆ ಜಿಲ್ಲಾ ಶಿಕ್ಷಣ ಅಧಿಕಾರಿಗೆ ದೂರು ನೀಡಿದ್ದಾರೆ.