Advertisement
ಇದನ್ನೂ ಓದಿ:ಇರಾನ್ ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿ ಅರೆ ಬೆತ್ತಲಾಗಿ ಪ್ರತಿಭಟಿಸಿದ ನಟಿ
Related Articles
Advertisement
ಭಗವಂತ್ ಸಿಂಗ್ ಮತ್ತು ಲೈಲಾ ದಂಪತಿಗೆ ಆರ್ಥಿಕ ಮುಗ್ಗಟ್ಟು ಬಾಧಿಸುತ್ತಿತ್ತು. ಹೀಗಾಗಿ ದೇವರ ಸಂಪ್ರೀತಿ ಗಳಿಸುವ ನಿಟ್ಟಿನಲ್ಲಿ ನರಬಲಿ ಕೊಡುವ ನಿರ್ಧಾರಕ್ಕೆ ಬಂದಿದ್ದು, ಇದಕ್ಕೆ ರಶೀದ್ ಅಲಿಯಾಸ್ ಮೊಹಮ್ಮದ್ ಶಫಿ ಈ ದಂಪತಿಗೆ ನೆರವಾಗಿದ್ದ.
ನರಬಲಿ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಶಫಿ ಕೊಲೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಎರಡು ವರ್ಷಗಳ (2020ರ ಆಗಸ್ಟ್ 5) ಹಿಂದೆ ಪುಥೆನ್ ಕ್ರುಝ್ ಎಂಬಲ್ಲಿ ಹಿರಿಯ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಶಫಿ ಬಂಧನಕ್ಕೊಳಗಾಗಿದ್ದ. ಲಾರಿ ಚಾಲಕನಂತೆ ಪೋಸ್ ಕೊಟ್ಟಿದ್ದ ಶಫಿ ಮಹಿಳೆ ದೇಹದ ಮೇಲೆ ಹಲವು ಗಾಯ ಮಾಡಿದ್ದ. ಈ ಪ್ರಕರಣದಲ್ಲಿ ಶಫಿ, ಮಹಿಳೆ ಸೇರಿದಂತೆ ಮೂವರು ಬಂಧನಕ್ಕೊಳಗಾಗಿದ್ದು, ಕಳೆದ ವರ್ಷ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವುದಾಗಿ ವರದಿ ವಿವರಿಸಿದೆ.
ಬ್ಲ್ಯಾಕ್ ಮ್ಯಾಜಿಕ್ (ಮಂತ್ರವಾದಿ) ರೀತಿ ಪೋಸ್ ಕೊಟ್ಟು ಹಲವು ಕೊಲೆ ಪ್ರಕರಣಗಳಲ್ಲಿ ಶಫಿ ಶಾಮೀಲಾಗಿದ್ದಾನೆ. ತಿರುವಲ್ಲಾದಲ್ಲಿನ ಪ್ರಕರಣದಲ್ಲಿಯೂ ಶಫಿ ಇಬ್ಬರು ಮಹಿಳೆಯರಿಗೆ ಅಶ್ಲೀಲ ಸಿನಿಮಾಗಳಲ್ಲಿ ನಟಿಸುವ ಆಮಿಷವೊಡ್ಡಿ ಭಗವಂತ್ ಸಿಂಗ್ ಮತ್ತು ಲೈಲಾ ಮನೆಗೆ ಕರೆತಂದಿದ್ದ. ಅಲ್ಲಿ ಅವರನ್ನು ಬಲವಂತವಾಗಿ ಕಟ್ಟಿಹಾಕಿ, ಅವರ ದೇಹದ ಭಾಗಗಳನ್ನು ಹರಿತವಾದ ಆಯುಧದಿಂದ ಕತ್ತರಿಸಿ ಹಾಕಲಾಗಿತ್ತು ಎಂದು ಕೊಚ್ಚಿ ಪೊಲೀಸ್ ಆಯುಕ್ತ ನಾಗರಾಜು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಇದೊಂದು ನರಭಕ್ಷಕತನದ ಪ್ರಕರಣದಂತೆ ಇದ್ದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಶಫಿ ಕೊಚ್ಚಿಯಲ್ಲಿ ಮಾದಕ ವಸ್ತು ಕಳ್ಳಸಾಗಣೆಯ ಮುಖಂಡನಾಗಿದ್ದಾನೆ ಎಂದು ವರದಿ ತಿಳಿಸಿದೆ. ಪೆರುಂಬಾವೂರ್ ನಿವಾಸಿಯಾಗಿರುವ ಶಫಿಯನ್ನು ರಶೀದ್ ಎಂದು ಕರೆಯಲಾಗುತ್ತಿದೆ.
ಕಳೆದ ಒಂದು ವರ್ಷದಿಂದ ಶಫಿ ಎರ್ನಾಕುಲಂನಲ್ಲಿನ ಗಾಂಧಿನಗರದಲ್ಲಿ ವಾಸವಾಗಿದ್ದಾನೆ, ಈತನ ಬಳಿ ಬಸ್, ಜೀಪ್ ಸೇರಿದಂತೆ ನಾಲ್ಕು ವಾಹನಗಳಿವೆ. ಈ ಹಿಂದೆ ಕಲಮಶ್ಶೇರಿಯಲ್ಲಿನ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಶಫಿ ಬಂಧನಕ್ಕೊಳಗಾಗಿದ್ದ. ಈತ ಭಾಗಿಯಾಗಿರುವ ಹಲವು ನಿಗೂಢ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.