ಕಲ್ಲಿಕೋಟೆ : ಕೇರಳದ ಕಲ್ಲಿಕೋಟೆಯಲ್ಲಿರುವ ಏಷ್ಯಾನೆಟ್ ಚಾನೆಲ್ ಕಚೇರಿಯ ಮೇಲೆ ಪೊಲೀಸರು ಭಾನುವಾರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯದಲ್ಲಿ ಶಾಲಾ ಬಾಲಕಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಚಾನೆಲ್ ಸುದ್ದಿ ಬಿತ್ತರಿಸಿದನ್ನು ಖಂಡಿಸಿ, ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್ಐ ),ಚಾನೆಲ್ ಕಚೇರಿಗೆ ನುಗ್ಗಿ, ದಾಂಧಲೆ ನಡೆಸಿದ್ದ ಬೆನ್ನಲ್ಲೇ, ಈ ಬೆಳವಣಿಗೆ ವರದಿಯಾಗಿದೆ.
ಮಾಧ್ಯಮ ಸಂಸ್ಥೆ ಕಚೇರಿ ಪ್ರವೇಶ ಮಾಡಿ, ಪೊಲೀಸರು ಶೋಧಿಸಿದ ಕ್ರಮಕ್ಕೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಂಭೀರ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪಿಣರಾಯಿ ಸರ್ಕಾರ,ಎಸ್‌ಎಫ್ಐ ಮತ್ತು ಪೊಲೀಸರನ್ನು ಬಳಸಿಕೊಂಡು, ಮಾಧ್ಯಮಗಳ ಬಾಯಿ ಮುಚ್ಚಿಸಿ, ಜನರಿಂದ ಸತ್ಯ ಮುಚ್ಚಿಡಬಹುದು ಎಂದು ಭಾವಿಸಿದೆ ಎಂದಿದ್ದಾರೆ.
ಚಾನೆಲ್ ಕಚೇರಿಗೆ ನುಗ್ಗಿ, ಸಿಬ್ಬಂದಿಗೆ ಬೆದರಿಕೆ ಹಾಕಿದ್ದ ಎಸ್‌ಎಫ್ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಪ್ರಸ್ ಕ್ಲಬ್ ಆಫ್ ಇಂಡಿಯಾ, ಐಡಬ್ಲೂéಪಿಸಿ, ಡಿಯುಜೆ ಸೇರಿದಂತೆ ಹಲವು ಮಾಧ್ಯಮ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.