ತಿರುವನಂತಪುರಂ:ಮಲಯಾಳಂ ಚಿತ್ರೋದ್ಯಮದಲ್ಲಿನ ಲೈಂಗಿಕ ಹಗರಣ ಭಾರೀ ಸಂಚಲನ ಮೂಡಿಸಿದ್ದು, ನಟಿಯರ ಆರೋಪದ ಹಿನ್ನೆಲೆಯಲ್ಲಿ ಮಲಯಾಳಂ ನಟ ಸಿದ್ದಿಖಿ(Siddique) ವಿರುದ್ಧ ಕೇರಳ ಪೊಲೀಸರು ಅತ್ಯಾ*ಚಾರ ಆರೋಪದಡಿ ಎಫ್ ಐಆರ್ (FIR) ದಾಖಲಿಸಿರುವುದಾಗಿ ವರದಿ ತಿಳಿಸಿದೆ.
ನಟಿಯರ ದೂರಿನ ಆಧಾರದ ಮೇಲೆ ತ್ರಿವೇಂಡ್ರಮ್ ಮ್ಯೂಸಿಯಂ ಪೊಲೀಸ್ ಜಾಮೀನು ರಹಿತ (Non Bailable) ಆರೋಪದಲ್ಲಿ ರೇ*ಪ್ ಕೇಸ್ ಅನ್ನು ದಾಖಲಿಸಿರುವುದಾಗಿ ವರದಿ ವಿವರಿಸಿದೆ.
ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಆರೋಪದ ಕುರಿತು ತನಿಖೆ ನಡೆಸಲು ರಚಿಸಿದ್ದ ವಿಶೇಷ ತನಿಖಾ ತಂಡ(Special Investigation Team)ಕ್ಕೆ ಮಂಗಳವಾರ (ಆ.27) ಸಂಜೆ ನಟಿ ದೂರು ನೀಡಿರುವುದಾಗಿ ವರದಿ ತಿಳಿಸಿದೆ.
2016ರಲ್ಲಿ ನಡೆದಿದ್ದ ಈ ಘಟನೆ ಬಗ್ಗೆ ನಟ ಸಿದ್ದಿಖಿ ವಿರುದ್ಧ ದೂರು ನೀಡಲು ನಟಿ ತಯಾರಾಗಿರಲಿಲ್ಲವಾಗಿತ್ತು. ಆದರೆ ಹೇಮಾ ಸಮಿತಿ ವರದಿ ಬಗ್ಗೆ ಹಿರಿಯ ನಟಿಯರು ಮೌನ ಮುರಿದ ನಂತರ ನಟಿ ದೂರು ನೀಡಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.
ತನ್ನ ವಿರುದ್ಧದ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ನಟ ಸಿದ್ದಿಖಿ ಪ್ರತಿಕ್ರಿಯೆ ನೀಡಿದ್ದು, ಲೈಂಗಿಕ ಕಿರುಕುಳದ ಆರೋಪದ ಬೆನ್ನಲ್ಲೇ ಸಿದ್ದಿಖಿ ಮಲಯಾಳಂ ಸಿನಿಮಾ ಕಲಾವಿದರ (AMMA) ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ:ICC Chairman;ಅಡೆತಡೆಗಳನ್ನು ಕಿತ್ತುಹಾಕಲು ಪ್ರಯತ್ನ, ಟೆಸ್ಟ್ ಕ್ರಿಕೆಟ್‌ಗೆ ಆದ್ಯತೆ:ಜಯ್ ಶಾ