Advertisement
ಬಿಗ್ ಬಾಸ್ ಮಲಯಾಳಂ ಸೀಸನ್ 5 ಕಾರ್ಯಕ್ರಮದ ವಿಜೇತ ಆಯೋಜಕರ ವಿರುದ್ಧ ವಾಗ್ದಾಳಿ ನಡೆಸಿ ಕೆಲವೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
Related Articles
Advertisement
“ಬಿಗ್ ಬಾಸ್ ಮಲಯಾಳಂ ಸೀಸನ್ 6 ತಂಡವು ಡಿಜೆ ಸಿಬಿನ್ ಅವರನ್ನು ಮಾನಸಿಕವಾಗಿ ದುರ್ಬಲ ಸ್ಪರ್ಧಿ ಎಂದು ತೋರಿಸಲು ಪ್ರಯತ್ನಿಸಿದೆ. ಅವರು ಶೋನಲ್ಲಿದ್ದಾಗ ಮಾನಸಿಕ ಸಮಸ್ಯೆಗಳಿಗೆ ಕೆಲವು ಔಷಧಿಗಳನ್ನು ಸಹ ನೀಡಿದ್ದರು. ಏಷ್ಯಾನೆಟ್‌ನ ಉನ್ನತ ನಿರ್ವಹಣೆಯಲ್ಲಿರುವ ಇಬ್ಬರು ವ್ಯಕ್ತಿಗಳು ಇದಕ್ಕೆ ಸಂಪೂರ್ಣ ಹೊಣೆಗಾರರು” ಎಂದು ಅಖಿಲ್ ಗಂಭೀರ ಆರೋಪವನ್ನು ಮಾಡಿದ್ದಾರೆ.
“ನಾನು ಹೇಳುತ್ತಿರುವುದು ತಪ್ಪು ಎಂದು ಸಾಬೀತಾದರೆ ನಾನು ಸಿನಿಮಾ ಕ್ಷೇತ್ರವನ್ನು ತೊರೆಯಲು ಸಿದ್ಧ. ಈ ತಂಡದಿಂದ ಸ್ಪರ್ಧಿಗಳು ವಿಶೇಷವಾಗಿ ಮಹಿಳೆಯರನ್ನು ಕೆಟ್ಟದಾಗಿ ಬಳಸಿಕೊಳ್ಳಲಾಗಿದೆ. ನಿರೂಪಕ ಮೋಹನ್‌ಲಾಲ್‌ಗೆ ಈ ನಡೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ” ಎಂದು ಅವರು ಹೇಳಿದ್ದಾರೆ.
“ಕಾರ್ಯಕ್ರಮಕ್ಕೆ ಪ್ರವೇಶ ಪಡೆಯುವ ಸಲುವಾಗಿ ಈ ತಂಡವು ಅನೇಕ ಸ್ಪರ್ಧಿಗಳ ಸಂಭಾವನೆಯಿಂದ ಕಮಿಷನ್ ಕೂಡ ಕೇಳಿದೆ. ನಾನು ಬಹಳ ಸಮಯದಿಂದ ಏಷ್ಯಾನೆಟ್ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದ್ದೇನೆ. ಈ ಕಾರಣದಿಂದ ಇಷ್ಟುದಿನ ಸಮ್ಮನಿದ್ದೆ. ಕಾರ್ಯಕ್ರಮದ ನಿರ್ದೇಶಕ ಅರ್ಜುನ್ ಸೇರಿದಂತೆ ಬಿಗ್ ಬಾಸ್ ಮಲಯಾಳಂ ತಂಡದ ಅನೇಕ ಸದಸ್ಯರು ಇದೇ ಕಾರಣದಿಂದ ಕಾರ್ಯಕ್ರಮವನ್ನು ತೊರೆದಿದ್ದಾರೆ. ರುಬಿನಾ ಎಂಬ ಹೆಸರಿನ ಕ್ರಿಯೇಟಿವ್ ಹೆಡ್ ನ್ನು ಸೀಸನ್ 6 ರಲ್ಲಿ ಸೈಡ್ ಲೈನ್ ಮಾಡಲಾಗಿದೆ” ಎಂದು ಅವರು ಹೇಳಿದ್ದಾರೆ.
ಬಿಗ್ ಬಾಸ್ ಮಲಯಾಳಂ ತಂಡವು ಅದರ ಎಲ್ಲಾ ಸೀಸನ್‌ಗಳಲ್ಲಿ ಯಾರು ಟೈಟಲ್ ವಿನ್ ಆಗಬೇಕೆನ್ನುವುದನ್ನು ಮೊದಲೇ ಫಿಕ್ಸ್ ಮಾಡಿರುತ್ತದೆ. ಬಿಗ್ ಬಾಸ್ ನಲ್ಲಿ ಸಿಬಿನ್ ಅವರ ಜನಪ್ರಿಯತೆ ಹೆಚ್ಚಾಗುತ್ತಿತ್ತು. ಅವರು ಮೊದಲೇ ನಿರ್ಧರಿತವಾದ ಸ್ಪರ್ಧಿಯನ್ನು ಮೀರಿಸುತ್ತಾರೆ ಎನ್ನುವ ಭೀತಿಯಿಂದಲೇ ಅವರನ್ನು ದೊಡ್ಮನೆಯಿಂದ ಹೊರಹಾಕಲಾಯಿತು ಎಂದು ನನಗೆ ಅನ್ನಿಸುತ್ತದೆ. ತಂಡವು ಐದನೇ ಸೀಸನ್ ನಲ್ಲಿ ನನ್ನ ಜೊತೆಯೂ ಅದೇ ರೀತಿ ಮಾಡಲು ಪ್ರಯತ್ನಿಸಿತ್ತು. ಆದರೆ ಆ ತಂತ್ರವು ವಿಫಲವಾಯಿತು. ಪರ್ಲಿ ಮಾನೆ ಸೀಸನ್ 1 ರ ವಿಜೇತರಾಗುವುದು ಫಿಕ್ಸ್ ಆಗಿತ್ತು. ಆದರೆ ಅಂತಿಮವಾಗಿ ಪ್ರೇಕ್ಷಕರ ಬೆಂಬಲದಿಂದ ಸಾಬುಮೋನ್ ಟ್ರೋಫಿಯನ್ನು ಗೆದ್ದರು ಎಂದು ಹೇಳಿದ್ದಾರೆ.