Advertisement

ಕೊಳವೆಯಲ್ಲಿ ಶಿಶು ಶವ

11:30 AM Apr 16, 2018 | Karthik A |

ಪಾಲಕ್ಕಾಡ್‌: ಶೌಚಾಲಯ ಶುದ್ಧಗೊಳಿಸಲು ಆಗಮಿಸಿದ್ದ ಪೌರ ಕಾರ್ಮಿಕರಿಗೆ ಕಮೋಡಿನಲ್ಲಿ 2 ದಿನಗಳ ಹೆಣ್ಣು ಶಿಶುವಿನ ಶವ ಸಿಕ್ಕಿದೆ. ಡಾ| ಅಬ್ದುಲ್‌ ರೆಹಮಾನ್‌ ಎಂಬ ವೈದ್ಯರ ಈ ಕ್ಲಿನಿಕ್‌ನಲ್ಲಿ ಕಳೆದೆರಡು ದಿನಗಳಿಂದ ನೀರು ಸರಿಯಾಗಿ ಹೋಗುತ್ತಿಲ್ಲವೆಂದು ಅವರು ಪ್ಲಂಬರ್‌ಗಳನ್ನು ಕರೆದಿದ್ದರು. ಸ್ವಚ್ಛತೆಗೆ ಇಳಿದಿದ್ದ ಪ್ಲಂಬರ್‌ ಗಳಿಗೆ ಕಮೋಡಿನಿಂದ ಹೊರಬಂದಿರುವ ಪೈಪಿನಲ್ಲಿ ಶವ ಸಿಕ್ಕಿದೆ. ಶಿಶುವಿನ ಹೊಕ್ಕಳು ಬಳ್ಳಿ ಹಾಗೇ ಇದ್ದು ತಪಾಸಣೆಗೆ ಬಂದಿದ್ದ ಯಾರೋ ಮಗುವನ್ನು ಅಲ್ಲೇ ಹೆತ್ತು, ಬಿಸಾಕಿ ಹೋಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next