Advertisement

ಇರಾನ್ ಮಾದರಿ: ಕೇರಳದಲ್ಲಿ ಹಿಜಾಬ್ ಮುಸ್ಲಿಂ ಮಹಿಳೆಯರ ಪ್ರತಿಭಟನೆ

03:23 PM Nov 07, 2022 | Team Udayavani |

ಕೋಝಿಕೋಡ್‌ : ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಆಂದೋಲನಕ್ಕೆ ಬೆಂಬಲ ಸೂಚಿಸಿ ಕೇರಳದ ಕೆಲ ಮುಸ್ಲಿಂ ಮಹಿಳೆಯರು ಹಿಜಾಬ್ ಅನ್ನು ಸುಟ್ಟು ಹಾಕಿ ಪ್ರತಿಭಟಿಸಿದ ಘಟನೆ ಭಾನುವಾರ (ನ6 ರಂದು) ನಡೆದಿದೆ. ಕೇರಳ ಯುಕ್ತಿವಾದಿ ಸಂಗಮ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಈ ಘಟನೆ ನಡೆದಿದೆ.

Advertisement

ಮುಂದಿನ ತಿಂಗಳು ಮಲಪ್ಪುರಂನಲ್ಲಿ ನಡೆಯಲಿರುವ ಮತ್ತೊಂದು ಸೆಮಿನಾರ್‌ಗೆ ಮುನ್ನ “ಅಭಿಮಾನಿಗಳು-ವಿಜ್ಞಾನ ಮತ್ತು ಮುಕ್ತ ಚಿಂತನೆ” ಎಂಬ ಸೆಮಿನಾರ್ ಅನ್ನು ಕೋಝಿಕೋಡ್‌ನಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಭಾಗವಾಗಿ, ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಚಳವಳಿಗೆ ಒಗ್ಗಟ್ಟಿನಿಂದ ಬೆಂಬಲ ಸೂಚಿಸಿದ ಕೆಲವು ಮುಸ್ಲಿಂ ಮಹಿಳೆಯರು ಹಿಜಾಬ್ ಅನ್ನು ಸುಟ್ಟು ಹಾಕಿ ಆಕ್ರೋಶ ಹೊರ ಹಾಕಿದರು.

ಸಂಘಟನೆಯ ಆರು ಮುಸ್ಲಿಂ ಮಹಿಳೆಯರು ಹಿಜಾಬ್ ಗಳನ್ನು ಸುಡುವ ನೇತೃತ್ವ ವಹಿಸಿದ್ದರು. ಭಾರತದಲ್ಲಿ ಸಾರ್ವಜನಿಕವಾಗಿ ಹಿಜಾಬ್ ದಹನದ ಮೊದಲ ಘಟನೆ ಇದಾಗಿದೆ.

ಇರಾನ್‌ನಲ್ಲಿ ಹಿಜಾಬ್ ಕಡ್ಡಾಯದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರಿಗೆ ಒಗ್ಗಟ್ಟಿನಿಂದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು ಮತ್ತು ಫಲಕಗಳನ್ನು ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next