Advertisement

ಕೇರಳದ ಖ್ಯಾತ ಮಾಡೆಲ್‌, ನಟಿ ಶಹಾನಾ ಸಾವು

12:38 AM May 14, 2022 | Team Udayavani |

ಕಲ್ಲಿಕೋಟೆ: ಕೇರಳದ ಖ್ಯಾತ ಮಾಡೆಲ್‌ ಮತ್ತು ನಟಿ ಶಹಾನಾ(20) ಎಂಬವರು ಅತ್ಯಂತ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.

Advertisement

ಶುಕ್ರವಾರ ಬೆಳಗಿನ ಜಾವ ಕಲ್ಲಿಕೋಟೆಯಲ್ಲಿರುವ ಅವರ ಆಪಾರ್ಟ್‌ಮೆಂಟ್‌ನ ಕಿಟಕಿ ಗ್ರಿಲ್‌ಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.

ಶಹಾನಾ ಅವರ ಪೋಷಕರ ಪ್ರಕಾರ, ಈ ಸಾವಿಗೆ ಪತಿಯೇ ಕಾರಣ. ಒಂದೂವರೆ ವರ್ಷದ ಹಿಂದೆ ಸಾಜೀದ್‌ ಎಂಬವರ ಜತೆಗೆ ಶಹಾಹ ವಿವಾಹವಾಗಿತ್ತು.

ಆದರೆ ಆತ ಶಹಾನಾಗೆ ಕೌಟುಂಬಿಕ ಹಿಂಸೆ ನೀಡುತ್ತಿದ್ದ. ಈ ಕಾರಣದಿಂದಲೇ ತಮ್ಮ ಪುತ್ರಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣ ಸಂಬಂಧ ಸಾಜೀದ್‌ನನ್ನು ಬಂಧಿಸಲಾಗಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next