Advertisement

ಜಮ್ಮು-ಕಾಶ್ಮೀರವನ್ನು ಭಾರತ ಆಕ್ರಮಿತ ಎಂದು ವಿವಾದ ಸೃಷ್ಟಿಸಿದ ಕೇರಳ ಶಾಸಕ!

09:41 PM Aug 12, 2022 | Team Udayavani |

ತಿರುವನಂತಪುರ: ಜಮ್ಮು ಮತ್ತು ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡು ಕೇರಳದ ಸಿಪಿಎಂ ಶಾಸಕ ಕೆ.ಟಿ.ಜಲೀಲ್‌ ವಿವಾದಕ್ಕೆ ಸಿಲುಕಿದ್ದಾರೆ.

Advertisement

ಜಲೀಲ್‌ ಅವರು, “ಪಾಕಿಸ್ತಾನಕ್ಕೆ ಸೇರಿರುವ ಕಾಶ್ಮೀರವನ್ನು ಆಜಾದ್‌ ಕಾಶ್ಮೀರ ಎನ್ನಲಾಗುತ್ತದೆ. ಆ ಪ್ರದೇಶದಲ್ಲಿ ಪಾಕಿಸ್ತಾನದ ಸರ್ಕಾರಕ್ಕೆ ನೇರ ನಿಯಂತ್ರಣವಿಲ್ಲ. ಭಾರತ ಆಕ್ರಮಿತ ಕಾಶ್ಮೀರದಲ್ಲಿ ಜಮ್ಮು, ಕಾಶ್ಮೀರ ಕಣಿವೆ ಮತ್ತು ಲಡಾಖ್‌ ಇದೆ’ ಎಂದು ಮಲಯಾಳಂ ಭಾಷೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಚಾರವಾಗಿ ಭಾರೀ ವಿರೋಧ ವ್ಯಕ್ತವಾಗಿದೆ.

ಬಿಜೆಪಿಯ ನಾಯಕ ಸಂದೀಪ್‌ ವೇರಿಯೆರ್‌ ಹೇಳಿಕೆಯನ್ನು ಖಂಡಿಸಿದ್ದು, “ಇದು ತುಂಬ ಗಂಭೀರವಾದ ವಿಚಾರ. ಅವರು ಹೇಳಿಕೆಯು ಅವರ ನಿಜವಾದ ಚಿಂತನೆಯನ್ನು ತೋರಿಸುತ್ತಿದೆ’ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next