ತ್ರಿಶೂರು: ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು ಅತ್ಯಂತ ಉದಾರ ನಡೆಯೊಂದರ ಮೂಲಕ ಮೇಲ್ಪಂಕ್ತಿಯೊಂದನ್ನು ಹಾಕಿಕೊಟ್ಟಿದ್ದಾರೆ.
ಜೀವಂತ ಉಳಿಯಬೇಕಾದರೆ ಕಿಡ್ನಿ ಮರುಜೋಡಣೆ ಮಾಡಿಸಿಕೊಳ್ಳಲೇಬೇಕಾದ ಸ್ಥಿತಿಯಲ್ಲಿದ್ದ ವ್ಯಕ್ತಿಯ ದುರ್ದೆಸೆಯನ್ನು ಗಮನಿಸಿದ ಅವರು; ತಮ್ಮ ಒಂದು ಬಂಗಾರದ ಬಳೆಯನ್ನೇ ಬಿಚ್ಚಿಕೊಟ್ಟಿದ್ದಾರೆ.
ಇದನ್ನೇ ವ್ಯಕ್ತಿಯ ನೆರವಿಗೆ ಮೊದಲ ದೇಣಿಗೆಯಾಗಿ ಸ್ವೀಕರಿಸಬೇಕೆಂದು ಕೇಳಿಕೊಂಡಿದ್ದಾರೆ. ಇದು ಭಾರೀ ಜನಮೆಚ್ಚುಗೆ ಪಡೆದಿದೆ.
ಈ ಘಟನೆ ನಡೆದಿದ್ದು ತ್ರಿಶೂರಿನ ಇರಿಂಜಾಲಕುಡದಲ್ಲಿ ಪ್ರದೇಶದಲ್ಲಿ. ಅಲ್ಲಿನ ವೈದ್ಯಕೀಯ ನೆರವು ಸಮಿತಿ ಕಿಡ್ನಿ ಮರುಜೋಡಣೆಗಾಗಿ ಒಂದು ಸಭೆ ನಡೆಸಿತ್ತು. ಅದರಲ್ಲಿ ಬಿಂದು ಅವರು ಪಾಲ್ಗೊಂಡಿದ್ದರು.
ಈ ವೇಳೆ 27 ವರ್ಷದ ವಿವೇಕ್ ಪ್ರಭಾಕರ್ ಅವರ ದುಸ್ಥಿತಿಯನ್ನು ಗಮನಿಸಿದ್ದಾರೆ. ಕೂಡಲೇ ಅವರು ತಮ್ಮ ಬಳೆಯನ್ನು ಬಿಚ್ಚಿ ನೀಡಿದ್ದಾರೆ. ಇದು ಬರೀ ಕೇರಳಕ್ಕೆ ಮಾತ್ರವಲ್ಲ, ದೇಶದ ಇತರೆ ಭಾಗದ ಜನತೆಗೂ ಮಾದರಿಯಾಗಿದೆ.