ತಿರುವನಂತಪುರ: ಆಕಾಶದಲ್ಲಿ ಹಾರುವ ಆಸೆಯೊಂದಿಗೆ ಕೇರಳ ರಾಜಧಾನಿ ತಿರುವನಂತಪುರ ಹೊರವಲಯದಲ್ಲಿ ಪ್ಯಾರಾಗ್ಲೈಡಿಂಗ್ ನಡೆಸುತ್ತಿದ್ದ ಪುರುಷ ಮತ್ತು ಮಹಿಳೆ ಎತ್ತರವಾದ ಹೈಮಾಸ್ಟ್ ದೀಪದ ಕಂಬಕ್ಕೆ ಸಿಕ್ಕಿ ನೇತಾಡಿದ ಘಟನೆ ನಡೆದಿದೆ.
Advertisement
ವರ್ಕಳ ಸಮೀಪದ ಪಾಪನಾಶನಂ ಬೀಚ್‌ನಿಂದ ಅವರಿಬ್ಬರು ಗ್ಲೈಡಿಂಗ್ ನಡೆಸುತ್ತಾ ಬರುತ್ತಿದ್ದರು. ಈ ಸಂದರ್ಭದಲ್ಲಿ ಅವರು ದೀಪದ ಕಂಬಕ್ಕೆ ಸಿಕ್ಕಿಕೊಂಡಿದ್ದಾರೆ.
ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬಂದಿ ಅವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಸಿಕ್ಕಿಹಾಕಿಕೊಂಡ ಫೋಟೋ ಮತ್ತು ವೀಡಿಯೋ ಈಗ ವೈರಲ್ ಆಗಿದೆ.
Related Articles
Advertisement