Advertisement

ಮಂಕಿಪಾಕ್ಸ್ ರೋಗ ಲಕ್ಷಣಗಳನ್ನು ಹೊಂದಿದ್ದ ಕೇರಳದ ಯುವಕ ಸಾವು

05:10 PM Aug 01, 2022 | Team Udayavani |

ತ್ರಿಶೂರ್: ಮಂಕಿಪಾಕ್ಸ್ ಕಾಯಿಲೆಯ ಲಕ್ಷಣಗಳನ್ನು ಹೊಂದಿದ್ದ ಕೇರಳದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್ ಕುರಂಜಿಯೂರ್ ಮೂಲದ ವ್ಯಕ್ತಿ ಶನಿವಾರ ಮೃತಪಟ್ಟಿದ್ದು, ಮೃತನ ಮಾದರಿ ಪರೀಕ್ಷೆಯಲ್ಲಿ ಮಂಕಿಪಾಕ್ಸ್‌ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ.

Advertisement

22 ವರ್ಷದ ಯುವಕ ದುಬೈನಿಂದ ಕೇರಳಕ್ಕೆ ಬರುವ ವೇಳೆ ವಿದೇಶದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮಂಕಿಪಾಕ್ಸ್ ಪಾಸಿಟಿವ್ ಬಂದಿದ್ದು, ಅಲ್ಲದೆ ಸುಸ್ತು ಹಾಗೂ ಜ್ವರದಿಂದ ಬಳಲುತ್ತಿದ್ದ ಯುವಕನನ್ನು ತ್ರಿಶೂರ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಯುವಕ ಸಾವನ್ನಪ್ಪಿದ್ದಾನೆ, ಈ ವೇಳೆ ಯುವಕನ ಮಾದರಿ ಪರೀಕ್ಷೆ ಬಂದಿದ್ದು ಅದರಲ್ಲೂ ಯುವಕನಿಗೆ ಮಂಕಿಪಾಕ್ಸ್‌ ಸೋಂಕು ದೃಢಪಟ್ಟಿದೆ.

ಮಂಕಿಪಾಕ್ಸ್ ಕಾಯಿಲೆ ಕೋವಿಡ್ ಸೋಂಕಿನಷ್ಟು ಪರಿಣಾಮಕಾರಿಯಲ್ಲ ಹಾಗಾಗಿ ಯುವಕನ ಸಾವಿಗೆ ನಿಖರ ಕಾರಣ ತಿಳಿದುಕೊಳ್ಳಬೇಕಾಗಿದೆ ಮುಂಜಾಗ್ರತಾ ಕ್ರಮವಾಗಿ ಯುವಕನ ಜೊತೆ ಸಂಪರ್ಕದಲ್ಲಿವರನ್ನು ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ಕೇರಳ ಅರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಸಿದ್ಧವಾಗಿದ್ದ ಡಿಕೆಶಿ ಭಾಷಣ ಬಹಿರಂಗ !?

Advertisement

Udayavani is now on Telegram. Click here to join our channel and stay updated with the latest news.

Next