ಮಂಡ್ಯ: ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಲ್ಲಿ ಇಬ್ಬರು ಕೇರಳದ ಮೂಲದವರೆಂಬುದು ತಿಳಿದುಬಂದಿದ್ದು, ಕೋಮುಗಲಭೆಗೆ ಕೇರಳದ ಸಂಪರ್ಕ ಇದೆಯಾ ಎಂದು ಬಗ್ಗೆ ತಿಳಿದುಕೊಳ್ಳಲು ಇಬ್ಬರು ಆರೋಪಿಗಳ ಹಿನ್ನೆಲೆ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈಗಾಗಲೇ 150 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, 55 ಮಂದಿಯನ್ನು ಬಂ ಧಿಸಲಾಗಿದೆ. ಪ್ರಕರಣದ 44ನೇ ಆರೋಪಿ ಯೂಸುಫ್, 61ನೇ ಆರೋಪಿ ನಾಸೀರ್ ಮೂಲ ತಿಳಿದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆನ್ನಲಾಗಿದೆ.
ಇಂಟರ್ನಲ್ ಸೆಕ್ಯೂರಿಟಿಗೆ ಮಾಹಿತಿ ಕಳುಹಿಸಿರುವ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಇಬ್ಬರು ನಿಷೇ ಧಿತ ಪಿಎಫ್‌ಐ ಸಂಘಟನೆಯವರಾ? ಅಥವಾ ಅವರ ಮೇಲೆ ಈ ಹಿಂದೆ ಯಾವುದಾದರೂ ಪ್ರಕರಣಗಳು ದಾಖಲಾಗಿವೆಯಾ?, ಯಾವುದಾದರೂ ಗಲಾಟೆಯಲ್ಲಿ ಭಾಗವಹಿಸಿದ್ದಾರಾ? ಎಂಬ ಸಂಪೂರ್ಣ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ.
ವಿಹಿಂಪ ಆರೋಪ
ಬಂಧಿತರಿಬ್ಬರು ನಿಷೇಧಿತ ಪಿಎಫ್‌ಐ ಸಂಘಟನೆಸದಸ್ಯರು ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ. ಗಲಭೆಯೂ ಪೂರ್ವ ನಿಯೋಜಿತವಾಗಿದ್ದು, ಗಲಭೆಗೂ ಮುನ್ನ ಮೆಡಿಕಲ್ ಸ್ಟೋರ್‌ನಲ್ಲಿ 200 ಮಾಸ್ಕ್ಗಳನ್ನು ಖರೀದಿಸಿದ್ದಾರೆಂದು ಆರೋಪಿಸಿತ್ತು. ಆರೋಪಿಗಳ ಮೂಲ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.