Advertisement

5.20 ಕೋಟಿ ರೂ ದಂಡ ಕಟ್ಟಿ: ಪಿಎಫ್‌ಐ ಗೆ ಕೇರಳ ಹೈಕೋರ್ಟ್ ಚಾಟಿ

02:51 PM Sep 29, 2022 | Team Udayavani |

ತಿರುವನಂತಪುರಂ : ಸೆಪ್ಟೆಂಬರ್ 23 ರಂದು ಕೇರಳದಾದ್ಯಂತ ಪಿಎಫ್‌ಐ ಕರೆ ನೀಡಿದ್ದ ಪ್ರತಿಭಟನೆ ವೇಳೆ ಸಂಭವಿಸಿದ ವ್ಯಾಪಕ ಹಿಂಸಾಚಾರ ನಂತರ ಸಾರ್ವಜನಿಕ ಆಸ್ತಿ ನಾಶಕ್ಕೆ ಸಂಬಂಧಿಸಿ 5.20 ಕೋಟಿ ರೂ ಠೇವಣಿ ಮಾಡುವಂತೆ ಕೇರಳ ಹೈಕೋರ್ಟ್ ಗುರುವಾರ ಆದೇಶಿಸಿದೆ.

Advertisement

ಹಿಂಸಾಚಾರದ ವೇಳೆ  ರಾಜ್ಯ ಸಾರಿಗೆ ಕೆಎಸ್‌ಆರ್‌ಟಿಸಿ ಬಸ್ ಗಳಿಗೆ ಮಾಡಿದ ವ್ಯಾಪಕ ಹಾನಿಗೆ 2 ವಾರಗಳಲ್ಲಿ 5.20 ಕೋಟಿ ರೂ ಠೇವಣಿ ಮಾಡುವಂತೆ ನಿಷೇಧಿತ ಸಂಘಟನೆಗೆ ಹೈಕೋರ್ಟ್ ನಿರ್ದೇಶಿಸಿದೆ.

ಇದನ್ನೂ ಓದಿ: ”ಆಪರೇಷನ್ ಗರುಡ”; ಏನಿದು ಸಿಬಿಐನ ಉನ್ನತ ಮಟ್ಟದ ಹೊಸ ಕಾರ್ಯಾಚರಣೆ?

ರಾಜ್ಯ ಮತ್ತು ಕೆಎಸ್‌ಆರ್‌ಟಿಸಿಯಿಂದ ಅಂದಾಜಿಸಲಾದ ಹಾನಿಗಳಿಗೆ ಎರಡು ವಾರಗಳಲ್ಲಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮೊತ್ತವನ್ನು ಪಾವತಿಸಬೇಕು ಎಂದು ಕೋರ್ಟ್ ಹೇಳಿದೆ.

ಪ್ರತಿಭಟನೆ ವೇಳೆ ತನ್ನ ಬಸ್‌ಗಳಿಗೆ ಆಗಿರುವ ಹಾನಿಗಾಗಿ ಪಿಎಫ್‌ಐನಿಂದ ಪರಿಹಾರವನ್ನು ಕೋರಿ ಕೆಎಸ್‌ಆರ್‌ಟಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

Advertisement

ಹಿಂಸಾಚಾರ ನಂತರ 487 ಪ್ರಕರಣಗಳನ್ನು ದಾಖಲಿಸಲಾಗಿದ್ದು, 1,992 ಜನರನ್ನು ಬಂಧಿಸಲಾಗಿದೆ ಮತ್ತು 687 ಮಂದಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಸರಕಾರವು ನ್ಯಾಯಾಲಯಕ್ಕೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next