ಕೊಚ್ಚಿ: ಕೊಲೆ ಯತ್ನ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಲಕ್ಷದ್ವೀಪದ ಮಾಜಿ ಸಂಸದ ಮೊಹಮದ್ ಫೈಜಲ್ ಅವರ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಬುಧವಾರ ರದ್ದುಪಡಿಸಿದೆ.
Advertisement
ಈ ಮೂಲಕ ಅವರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಇದೇ ಪ್ರಕರಣದಲ್ಲಿ ಫೈಜಲ್ ಅವರ ಸಹೋದರ ಸೇರಿದಂತೆ ಇತರೆ ಮೂವರು ಆರೋಪಿಗಳನ್ನು ಕೂಡ ನ್ಯಾಯಾಲಯ ಪ್ರಕರಣದಿಂದ ಖುಲಾಸೆಗೊಳಿಸಿದೆ.
ಲಕ್ಷದ್ವೀಪದ ಡೆಪ್ಯೂಟಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ(ಡಿಎಸ್‌ಜಿಐ) ಮನು ಎಸ್. ಅವರು ಕೇರಳ ಹೈಕೋರ್ಟ್‌ನ ಈ ತೀರ್ಪನ್ನು ದೃಢಪಡಿಸಿದ್ದಾರೆ. ಸರ್ಕಾರಿ ಶಾಲೆಯ ಶಿಕ್ಷಕಿ ಮೇಲೆ ಕೊಲೆ ಯತ್ನ ಪ್ರಕರಣದಲ್ಲಿ ಫೈಜಲ್ ಮತ್ತು ಇತರೆ ಮೂವರ ಹೆಸರುಗಳು ಉಲ್ಲೇಖವಾಗಿತ್ತು.