Advertisement

ಕೇರಳ : ಕಳೆದ 24 ಗಂಟೆಗಳಲ್ಲಿ 24,064 ಹೊಸ ಕೋವಿಡ್  ಪ್ರಕರಣಗಳು ಪತ್ತೆ..!

12:34 PM Jul 30, 2021 | Team Udayavani |

ತಿರುವನಂತಪುರಂ : ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ  ರಾಜ್ಯದಲ್ಲಿ 24,064 ಹೊಸ ಕೋವಿಡ್  ಪ್ರಕರಣಗಳು ಪತ್ತೆಯಾಗಿವೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Advertisement

ಕಳೆದ ಕೆಲವು ದಿನಗಳಂತೆ ರಾಜ್ಯದ ಮಲಪ್ಪುರಂ, ತ್ರಿಶ್ಶೂರ್, ಕೋಝಿಕೋಡ್, ಎರ್ನಾಕುಲಂ, ಪಾಲಕ್ಕಾಡ್, ಕೊಲ್ಲಂ, ಅಳಪ್ಪುಝಾ, ಕಣ್ಣೂರು, ತಿರುವನಂತಪುರಂ ಹಾಗೂ ಕೊಟ್ಟಾಯಂನಲ್ಲಿ ಅತೀ ಹೆಚ್ಚು ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.

ಇನ್ನು, ನಿನ್ನೆ ಒಂದೇ ದಿನ ಕೋವಿಡ್ ಸೋಂಕಿನಿಂದ 128 ಸೋಂಕಿತರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಇಂದು(ಶುಕ್ರವಾರ, ಜುಲೈ 30) ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ ಅಂಕಿ ಅಂಶದಲ್ಲಿ ಮಾಹಿತಿ ನೀಡಿದೆ.

ಇದನ್ನೂ ಓದಿ : ಬೊಮ್ಮಲಾಪುರಕ್ಕೆ ಬಿಎಸ್ ಯಡಿಯೂರಪ್ಪ ಭೇಟಿ: ರವಿ ಕುಟುಂಬಕ್ಕೆ 5 ಲಕ್ಷ ರೂ. ನೆರವು

ದಿನ ನಿತ್ಯ ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿರುವುದು ಭಾರಿ ಆತಂಕ ಸೃಷ್ಟಿ ಮಾಡಿದ್ದು, ಮೂರನೇ ಅಲೆಯ ಸುಳಿವಿದು ಎಂದು ಹೇಳಲಾಗುತ್ತಿದೆ.

Advertisement

ಕೇರಳದಲ್ಲಿ ಹೊಸದಾಗಿ ದಾಖಲಾಗುತ್ತಿರುವ ಒಟ್ಟು ಕೋವಿಡ್ ಸೋಂಕಿನ ಸರಾಸರಿ  ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜುಲೈ31ರಿಂದ ಆಗಸ್ಟ್ 1ರವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಕೇರಳದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಪರಿಣಾಮ ಕೇಂದ್ರ ಸರ್ಕಾರವು ಆರು ಸದಸ್ಯರನ್ನೊಳಗೊಂಡ ರಾಷ್ಟ್ರೀಯ ಸೋಂಕು ನಿಯಂತ್ರಣ ತಂಡವನ್ನು ಅಧ್ಯಯನಕ್ಕಾಗಿ ಕಳುಹಿಸಿರುವುದಾಗಿ ತಿಳಿಸಿದೆ.

ಇದನ್ನೂ ಓದಿ : ಮೇಘ ಸ್ಪೋಟ : ಲಾಹೌಲ್ ಸ್ಪಿಟಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ 200ಕ್ಕೂ ಹೆಚ್ಚು ಪ್ರವಾಸಿಗರು..!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next