ನವದೆಹಲಿ: ನಮ್ಮ ದೇಶವನ್ನು ಏಕತೆಯಲ್ಲಿ ಬಂಧಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿ ಎಂದು ಕೋಮು ಉದ್ವಿಗ್ನತೆಯ ಬಗ್ಗೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಇಂದಿನ ಸ್ಥಿತಿ ಹೇಗಿದೆ? ಕೋಮು ರಾಜಕಾರಣ ವಿಭಜನೆಗೆ ಕಾರಣವಾಯಿತು. ಭಾರತವು ವಿವಿಧ ದೇಶಗಳ ಪರಾಕಾಷ್ಠೆ ಎಂದು ಬ್ರಿಟಿಷರು 200 ವರ್ಷಗಳಿಂದ ನಮಗೆ ಕಲಿಸಿದರು. ಕೋಮುವಾದ ನಮಗೆ ಸ್ವಲ್ಪ ಸಮಯದವರೆಗೆ ತೊಂದರೆ ನೀಡುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಆರಿಫ್ ಮೊಹಮ್ಮದ್ ಖಾನ್ ಅವರು ಹಿಜಾಬ್ ವಿವಾದವಾದಾಗಲೂ ತನ್ನ ಅಭಿಪ್ರಾಯಗಳನ್ನು ಹೊರ ಹಾಕಿದ್ದರು, ಪ್ರವಾದಿ ಮೊಹಮ್ಮದ್ ಅವರ ಕುರಿತಾಗಿನ ವಿವಾದಿತ ಹೇಳಿಕೆಗಳ ಕುರಿತಾಗಿನ ದೇಶಾದ್ಯಂತ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಕುರಿತಾಗಿ ಈ ಪ್ರತಿಕ್ರಿಯೆ ನೀಡಿದ್ದಾರೆ.