Advertisement

NIA ಅಧಿಕಾರಿಗಳ ಬಲೆಗೆ ಸ್ವಪ್ನಾ ಸುರೇಶ್‌!

03:27 AM Jul 12, 2020 | Hari Prasad |

ಬೆಂಗಳೂರು: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ ಮತ್ತು ಸಂದೀಪ್‌ ನಾಯರ್‌ ಅವರನ್ನು ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಶನಿವಾರ ರಾತ್ರಿ ಬಂಧಿಸಿದ್ದಾರೆ.

Advertisement

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ವಪ್ನಾ ಸುರೇಶ್‌ ಬೆಂಗಳೂರಿನ ಸಂಬಂಧಿಯೊಬ್ಬರ ಮನೆಯಲ್ಲಿ ಕುಟುಂಬ ಸಹಿತ ತಲೆ ಮರೆಸಿಕೊಂಡಿದ್ದರು. ಕೇಂದ್ರ ಸರಕಾರ ತನಿಖೆಯನ್ನು ಎನ್‌ಐಎಗೆ ವಹಿಸಿತ್ತು.

ಈ ಸಂಬಂಧ ಕಾರ್ಯಾಚರಣೆ ನಡೆಸಿದ ಬೆಂಗಳೂರಿನ ಎನ್‌ಐಎ ಅಧಿಕಾರಿಗಳು ರಾತ್ರಿ 7 ಗಂಟೆಯ ಸುಮಾರಿಗೆ ಸ್ವಪ್ನಾ ಸುರೇಶ್‌ಳನ್ನು ಬಂಧಿಸಿ ಆಕೆಯ ಕುಟುಂಬ ಸದಸ್ಯರನ್ನು ವಶಕ್ಕೆ ಪಡೆದಿದ್ದಾರೆ.

ಶನಿವಾರ ರಾತ್ರಿಯೇ ಆರೋಪಿಗಳನ್ನು ಕೊಚ್ಚಿಗೆ ಕರೆದೊಯ್ದು ರವಿವಾರ ಬೆಳಗ್ಗೆ ಅಲ್ಲಿನ ಎನ್‌ಐಎ ಕೋರ್ಟ್‌ಗೆ ಹಾಜರುಪಡಿಸಲಾಗುವುದು ಎಂದು ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಗಳು ಕೇರಳದ ಆಡಳಿತ ಪಕ್ಷದ ಕೆಲವು ನಾಯಕರು, ಅಧಿಕಾರಿಗಳ ಜತೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ತಿರುವನಂತಪುರದಲ್ಲಿರುವ ಅರಬ್‌ ಎಮಿರೇಟ್ಸ್‌ ಕಾನ್ಸುಲೇಟ್‌ಗೆ ಅರಬ್‌ ಏರ್‌ ವೇಸ್‌ ಮೂಲಕ ಬಂದಿದ್ದ ಪಾರ್ಸೆಲ್‌ ಒಂದರಲ್ಲಿ 13 ಕೋಟಿ ರೂ. ಮೌಲ್ಯದ 31 ಕೆ.ಜಿ. ಚಿನ್ನ ಕಳ್ಳಸಾಗಣೆಯಾಗಿ ಬಂದಿತ್ತು.

Advertisement

ಈ ಕೃತ್ಯ ಸಂಬಂಧ ಸ್ವಪ್ನಾ ಸುರೇಶ್‌ ಮತ್ತು ಸಂದೀಪ್‌ ನಾಯರ್‌ ಹಾಗೂ ಸರಿತಾ ಸೇರಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.

‘ದೊಡ್ಡವರ’ ಜತೆಗೆ ಸಖ್ಯ?
ಸ್ವಪ್ನಾ ಅವರ ದೂರವಾಣಿ ಕರೆಗಳ ವಿವರ ಕಲೆ ಹಾಕುತ್ತಿರುವ ತನಿಖಾಧಿಕಾರಿ ಗಳಿಗೆ ಅನೇಕ ಮಾಹಿತಿಗಳು ಸಿಕ್ಕಿವೆ. ಯುಎಇ ದೂತಾವಾಸ ಕಚೇರಿಯಲ್ಲಿ, ಕೇರಳ ಸರಕಾರದಲ್ಲಿ ಉನ್ನತ ಅಧಿಕಾರಿಗಳ ಜತೆಗೆ ಆಕೆ ಟೆಲಿಫೋನ್‌ ಸಂಪರ್ಕ ಹೊಂದಿರುವ ಮಾಹಿತಿಗಳು ಲಭ್ಯವಾ ಗಿವೆ.

ಯಾರೀಕೆ ಸ್ವಪ್ನಾ ಸುರೇಶ್‌?
ಸ್ವಪ್ನಾ ಸುರೇಶ್‌ ತಿರುವನಂತಪುರದಲ್ಲಿ 2 ವರ್ಷ ಟ್ರಾವೆಲ್‌ ಏಜೆನ್ಸಿಯೊಂದರಲ್ಲಿ ಕೆಲಸ ಮಾಡಿ ಬಳಿಕ ಏರ್‌ ಇಂಡಿಯಾ ಸೇರಿದ್ದರು. ಅಲ್ಲಿ ಅಧಿಕಾರಿಯೊಬ್ಬರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಆದರೆ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಸಾಬೀತಾಗಿತ್ತು. ಅಬುಧಾಬಿಗೆ ಹಿಂದಿರು­ಗಿದ್ದ ಈಕೆಯನ್ನು ವಾಪಸ್‌ ಕರೆಸಿ­ಕೊಂಡು ವಿಚಾ­ರಣೆ ನಡೆಸಲಾಗುತ್ತಿತ್ತು.

ಆದರೆ ಪ್ರತೀ ಬಾರಿ ಪ್ರಭಾವಿಗಳಿಂದ ಪೊಲೀಸರಿಗೆ ಫೋನ್‌ ಬರು­ತ್ತಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ನಡುವೆ ಯುಎಇಯಲ್ಲಿ ಕಾನ್ಸುಲೇಟ್‌ ಜನರಲ್‌ ಆಗಿ ನೇಮಕಗೊಂಡಿದ್ದರೂ ವಜಾ­ಗೊಂಡಿದ್ದರು. ಆದರೆ ಸೌದಿಯ ಹಲವಾರು ರಾಜಕೀಯ ನಾಯಕರ ಸಂಪರ್ಕ ಗಳಿಸಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next