Advertisement

ಚಿನ್ನದ ಕಳ್ಳಸಾಗಣೆ ಆರೋಪ: ನನ್ನನ್ನು ಬೆದರಿಸಲು ಪ್ರಯತ್ನಿಸಬೇಡಿ; ಕೇರಳ ಸಿಎಂ

10:50 PM Jun 11, 2022 | Team Udayavani |

ಕೊಟ್ಟಾಯಂ: “ನಮಗೆ ಬೆದರಿಕೆ ಹಾಕಲು ಪ್ರಯತ್ನಿಸಬೇಡಿ. ನೀವೆಷ್ಟೇ ಆರೋಪ ಮಾಡಿದರೂ ಅದು ನಮ್ಮ ಮೇಲಾಗಲೀ, ನಮ್ಮ ಸರ್ಕಾರದ ಮೇಲಾಗಲೀ ಪರಿಣಾಮ ಬೀರುವುದಿಲ್ಲ. ಏಕೆಂದರೆ, ನನ್ನ ರಾಜ್ಯದ ಜನ ನಮ್ಮೊಂದಿಗಿದ್ದಾರೆ.’ಹೀಗೆಂದು ಹೇಳಿರುವುದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌.

Advertisement

ಚಿನ್ನದ ಕಳ್ಳ ಸಾಗಣೆ ಪ್ರಕರಣದಲ್ಲಿ ಪಿಣರಾಯಿ ಮತ್ತು ಕುಟುಂಬವೂ ಭಾಗಿಯಾಗಿದೆ ಎಂಬ ಮಾಹಿತಿಯನ್ನು ಆರೋಪಿ ಸ್ವಪ್ನಾ ಸುರೇಶ್‌ ಬಾಯಿಬಿಟ್ಟಿದ್ದಾರೆ ಎಂದು ಹೇಳಲಾದ ಆಡಿಯೋ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯಾದ್ಯಂತ ಪ್ರತಿಪಕ್ಷಗಳು ಪಿಣರಾಯಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸುತ್ತಿವೆ.
ಈ ಹಿನ್ನೆಲೆಯಲ್ಲಿ ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಪ್ರತಿಪಕ್ಷಗಳಿಗೆ ಸಿಎಂ ಪಿಣರಾಯಿ ಈ ರೀತಿ ತಿರುಗೇಟು ನೀಡಿದ್ದಾರೆ.

ವಿಧಾನಸಭೆ ಚುನಾವಣೆಗೂ ಮುನ್ನವೇ ಇಂಥ ಸಾವಿರಾರು ಆರೋಪಗಳನ್ನು ನನ್ನ ವಿರುದ್ಧ ಹೊರಿಸಲಾಗಿತ್ತು. ಆದರೆ, ಜನರು 99 ಸೀಟುಗಳನ್ನು ನೀಡಿ ನಮ್ಮನ್ನು ಗೆಲ್ಲಿಸಿದರು. ಪಟ್ಟಭದ್ರ ಹಿತಾಸಕ್ತಿಗಳು ಏನೇ ಗಿಮಿಕ್‌ ಮಾಡಿದರೂ ಸತ್ಯವೇನೆಂಬುದು ಜನರಿಗೆ ಗೊತ್ತು. ಹಾಗಾಗಿ ನನ್ನನ್ನು ಬೆದರಿಸಲು ಬರಬೇಡಿ ಎಂದು ಪಿಣರಾಯಿ ಹೇಳಿದ್ದಾರೆ.

ವರ್ಗಾವಣೆ ಮಾಡಿದ್ದೇಕೆ?:
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಶುಕ್ರವಾರ ರಾತ್ರೋರಾತ್ರಿ ಕೇರಳದ ಎಲ್‌ಡಿಎಫ್ ಸರ್ಕಾರ ಜಾಗೃತ ದಳ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ನಿರ್ದೇಶಕ ಎಂ.ಆರ್‌.ಅಜಿತ್‌ ಕುಮಾರ್‌ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇದರಿಂದ ಕೆಂಡಾಮಂಡಲವಾಗಿರುವ ಕಾಂಗ್ರೆಸ್‌, ಈ ದಿಢೀರ್‌ ವರ್ಗಾವಣೆಗೆ ಕಾರಣವನೇನು ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next