Advertisement

ಕೇರಳ: ಮಳೆಯಿಂದ ನಾಲ್ವರು ಸಾವು

02:03 AM Oct 13, 2021 | Team Udayavani |

ತಿರುವನಂತಪುರ: ಕೇರಳದಲ್ಲಿ ಮಂಗಳ­ವಾರ ಧಾರಾಕಾರ ಮಳೆಯಾಗಿದೆ.  ಪ್ರವಾಹ ಸಂಬಂಧಿಸಿದ ದುರಂತದಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವಿಗೀಡಾಗಿದ್ದಾರೆ.

Advertisement

ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ(ಎಸ್‌ಡಿಎಂಎ)ವು 9 ಜಿಲ್ಲೆಗಳಿಗೆ ಅ.15ರ ವರೆಗೆ ಎಲ್ಲೋ ಅಲರ್ಟ್‌ ಮತ್ತು ಕೆಲವು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಿದೆ.

ಮಲಪ್ಪುರಂ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಕರಿಪುರದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿದ್ದು, ಅದರ ಪಕ್ಕದ ಮನೆಯಲ್ಲಿದ್ದ 8 ವರ್ಷದ ಬಾಲಕಿ ಹಾಗೂ 7 ತಿಂಗಳ ಮಗು ಸಾವನ್ನಪ್ಪಿದೆೆ. ಮಳೆ, ಪ್ರವಾ­ಹ­ದಿಂದಾಗಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ.

ಇದನ್ನೂ ಓದಿ:ಕಲಬುರಗಿ: ಸಿದ್ದರಾಮಯ್ಯ ಮಾತನಾಡುತ್ತಿರುವಾಗಲೇ ಕಂಪಿಸಿದ ಭೂಮಿ

ಕಾಸರಗೋಡು, ತ್ರಿಶ್ಶೂರ್‌ ಸೇರಿ­ದಂತೆ 9 ಜಿಲ್ಲೆಗಳಲ್ಲಿ ಬುಧವಾರವೂ ಧಾರಾ­ಕಾರ ಮಳೆಯಾಗುವ ಎಚ್ಚರಿಕೆಯನ್ನು ಐ­ಎಂ­ಡಿ ನೀಡಿದೆ. ವಿಪತ್ತು ಸಂಭವಿ­ಸುವ ಸಾಧ್ಯತೆಯಿರುವ ಪ್ರದೇಶದಲ್ಲಿ ಜನರು ತುರ್ತು ಕಿಟ್‌ ಸಿದ್ಧವಾಗಿಟ್ಟುಕೊಳ್ಳಿ. ನೀರಿರುವ ಪ್ರದೇಶಕ್ಕೆ ತೆರಳುವುದು, ಗುಂಪು ಸೇರುವುದನ್ನು ಕಡಿಮೆ ಮಾಡಿ ಎಂದು ಎಚ್ಚರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next