Advertisement

Rahul N Kutty: ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಖ್ಯಾತ ಫುಡ್‌ ವ್ಲಾಗರ್

04:43 PM Nov 04, 2023 | Team Udayavani |

ಕೊಚ್ಚಿ: ಕೊಚ್ಚಿಯ ಖ್ಯಾತ ಫುಡ್ ವ್ಲಾಗರ್ ರಾಹುಲ್ ಎನ್ ಕುಟ್ಟಿ(33) ಶನಿವಾರ(ನ.4 ರಂದು) ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ರಾಹುಲ್‌ ತನ್ನ ಬೆಡ್‌ ರೂಮ್‌ ನಲ್ಲಿ ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವುದನ್ನು  ಕಂಡು ಆತನ ಪೋಷಕರು ಹಾಗೂ ಸ್ನೇಹಿತರು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಪೊಲೀಸರಿಗೆ ಕರೆ ಬಂದಿದೆ ಎಂದು ವರದಿ ತಿಳಸಿದೆ.

‘ಈಟ್ ಕೊಚ್ಚಿ ಈಟ್’ ಎನ್ನುವ ಯೂಟ್ಯೂಬ್‌ ಚಾನೆಲ್‌ ನಲ್ಲಿ ಫುಡ್‌ ವ್ಲಾಗ್‌ ಗಳನ್ನು ರಾಹುಲ್‌ ಅಪ್ಲೋಡ್‌ ಮಾಡುತ್ತಿದ್ದರು. ಸ್ಥಳೀಯ ಹೊಟೇಲ್‌, ರೆಸ್ಟೋರೆಂಟ್‌ ಗಳ ಫುಡ್‌ ರುಚಿಯನ್ನು ಅನಾವರಣಗೊಳಿಸುತ್ತಿದ್ದರು. ಇವರ ವಿಡಿಯೋಗಳನ್ನು ಅಪಾರ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

“ನಮ್ಮ ಪ್ರೀತಿಯ ರಾಹುಲ್ ಎನ್ ಕುಟ್ಟಿ ಅವರು ನಿಧನರಾಗಿದ್ದಾರೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ತುಂಬಾ ದುಃಖಿತರಾಗಿದ್ದೇವೆ ಎಂದು ‘ಈಟ್ ಕೊಚ್ಚಿ ಈಟ್’ ಪೇಜ್‌ ಪೋಸ್ಟ್‌ ಮಾಡಿದೆ.

‘ಈಟ್ ಕೊಚ್ಚಿ ಈಟ್’ ಪೇಜ್‌ ಗೆ 4.21 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಗಳಿದ್ದಾರೆ. ಸದ್ಯ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next