Advertisement

ನಾಗ್ಪುರದಲ್ಲಿ ಸೈಕಲ್ ಪೋಲೊ ಆಟಗಾರ್ತಿ ದುರಂತ ಅಂತ್ಯ; ವಿಮಾನ ನಿಲ್ದಾಣದಲ್ಲಿ ಕುಸಿದುಬಿದ್ದ ತಂದೆ

03:58 PM Dec 23, 2022 | Team Udayavani |

ಮಹಾರಾಷ್ಟ್ರ: ಕೇರಳದ ರಾಷ್ಟ್ರೀಯ ಸೈಕಲ್ ಪೋಲೊ ಆಟಗಾರ್ತಿ ಫಾತಿಮಾ ನಿಧಾ (10ವರ್ಷ) ಮಹಾರಾಷ್ಟ್ರದ ನಾಗ್ಪುರ್ ದಲ್ಲಿ ವಿಧಿವಶವಾಗಿರುವ ಘಟನೆ ನಡೆದಿದ್ದು, ಮಗಳ ನಿಧನದ ಸುದ್ದಿಯನ್ನು ಚಾನೆಲ್ ವೀಕ್ಷಿಸಿದ ತಂದೆ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದ ಪ್ರಸಂಗ ನಡೆದಿತ್ತು.

Advertisement

ಕೇರಳ ಅಳಪ್ಪುಳದ ಫಾತಿಮಾ ರಾಷ್ಟ್ರೀಯ ಸೈಕಲ್ ಪೋಲೊ ಚಾಂಪಿಯನ್ ಶಿಪ್ ನ ಸಬ್ ಜ್ಯೂನಿಯರ್ ಕೆಟಗರಿಯಲ್ಲಿ ಸ್ಪರ್ಧಿಸಲು ನಾಗ್ಪುರ್ ಕ್ಕೆ ತೆರಳಿದ್ದಳು. ಆದರೆ ಸ್ಪರ್ಧೆಯ ಆಯೋಜಕರು ತಾರತಮ್ಯ ತೋರಿಸಿದ್ದು, ವಿದ್ಯಾರ್ಥಿನಿ ಫಾತಿಮಾ ದುರಂತ ಅಂತ್ಯಕ್ಕೆ ಕಾರಣವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಮಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಂದೆ ಶಹಾಬುದ್ದೀನ್ ಗೆ ಮೊಬೈಲ್ ಕರೆ ಬಂದಿತ್ತು. ಕೂಡಲೇ ತಂದೆ ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ದೌಡಾಯಿಸಿದ್ದರು. ಆದರೆ ಅಲ್ಲಿ ಟಿವಿ ಚಾನೆಲ್ ನಲ್ಲಿ ಮಗಳ ಸಾವಿನ ಸುದ್ದಿ ಪ್ರಸಾರವಾಗುತ್ತಿರುವುದನ್ನು ಕಂಡು ಅಲ್ಲೇ ಕುಸಿದು ಬಿದ್ದಿದ್ದರು. ನಂತರ ಸುತ್ತಮುತ್ತಲಿದ್ದ ಪ್ರಯಾಣಿಕರು ಶಹಾಬುದ್ದೀನ್ ಅವರನ್ನು ಸಮಾಧಾನಪಡಿಸಿರುವುದಾಗಿ ವರದಿ ತಿಳಿಸಿದೆ.

ಫಾತಿಮಾ ಸಂಬಂಧಿಕರ ಮಾಹಿತಿ ಪ್ರಕಾರ, ಸ್ಪರ್ಧಾ ಕಣದಲ್ಲಿದ್ದ ಫಾತಿಮಾ ಸುಸ್ತಾಗುತ್ತಿರುವುದಾಗಿ ತಿಳಿಸಿದ್ದು, ಬಳಿಕ ವಾಂತಿ ಆರಂಭವಾಗಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಇಂಜೆಕ್ಷನ್ ನೀಡಿದ ನಂತರ ಆಕೆ ಸಾವನ್ನಪ್ಪಿದ್ದಳು ವರದಿ ತಿಳಿಸಿದ್ದಾರೆ.

ಸೈಕಲ್ ಪೋಲೊ ಚಾಂಪಿಯನ್ ಶಿಪ್ ಸ್ಪರ್ಧೆಗಾಗಿ ಕೇರಳದ ಎರಡು ತಂಡಗಳು ಭಾಗವಹಿಸಿದ್ದವು. ಫಾತಿಮಾ ಹಾಗೂ ಇನ್ನಿತರ ಆಟಗಾರರಿಗೆ ನಾಗ್ಪುರಕ್ಕೆ ತೆರಳಲು ಅನುಮತಿ ನೀಡಲಾಗಿತ್ತು.

Advertisement

ಸೈಕಲ್ ಪೋಲೊ ಫೆಡರೇಶನ್ ಮತ್ತು ಇತರ ಸಂಘಟಕರು ಫಾತಿಮಾ ಸೇರಿದಂತೆ ಕೇರಳದ ಸ್ಪರ್ಧಾಳುಗಳಿಗೆ ಯಾವುದೇ ವಸತಿ, ಊಟೋಪಚಾರ ನೀಡದೆ ತಾರತಮ್ಯ ಎಸಗಿದ್ದರು ಎಂದು ಕೇರಳ ಕಾಂಗ್ರೆಸ್ ಮುಖಂಡ ಕೆ.ಸುಧಾಕರನ್ ಆರೋಪಿಸಿದ್ದಾರೆ.

ನಾಗ್ಪುರಕ್ಕೆ ತೆರಳಿದ್ದ ಸ್ಪರ್ಧಾಳುಗಳು ಅನುಭವಿಸಿರುವ ಮಾನಸಿಕ ಒತ್ತಡ, ತಾರತಮ್ಯದ ಬಗ್ಗೆ ರಾಜ್ಯ ಸರ್ಕಾರ ಮತ್ತು ಕ್ರೀಡಾ ಇಲಾಖೆ ಮಾಹಿತಿ ತಿಳಿದುಕೊಂಡು ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಸುಧಾಕರನ್ ಒತ್ತಾಯಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next