ಕೇರಳ: ಆಗ ತಾನೆ ಮದುವೆಯಾದ ನವಜೋಡಿ ಆನೆಯ ಬಳಿ ನಿಂತು ಪೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದರು. ಈ ವೇಳೆ ಕೆರಳಿದ ಆನೆ ಅಲ್ಲಿದ್ದ ವ್ಯಕ್ತಿಯನ್ನು ಹಿಡಿದು, ಎಳೆದು ಬೀಳಿಸಿದ ಘಟನೆ ಗುರುವಾಯೂರು ದೇವಸ್ಥಾನದಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Advertisement
ಆನೆ ಕ್ರೋಧಗೊಳ್ಳುತ್ತಿದ್ದಂತೆ ನವಜೋಡಿ ಹಾಗೂ ಅಲ್ಲಿ ನೆರೆದಿದ್ದ ಭಕ್ತರು ಓಡಿ ಹೋಗಿದ್ದಾರೆ. ಮಾವುತ ಆನೆಯನ್ನು ನಿಯಂತ್ರಿಸಿದರಿಂದ, ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿ ಕೇವಲ ಗಾಯಗೊಂಡು ಬಚಾವಾಗಿದ್ದಾರೆ.
ಈ ದೃಶ್ಯವನ್ನು ನವಜೋಡಿಗೆ ಪೋಟೋಶೂಟ್ ಮಾಡುತ್ತಿದ್ದ ಪೋಟೋಗ್ರಾಫರ್ ಸೆರೆಹಿಡಿದಿದ್ದಾನೆ.