ಕಾಸರಗೋಡು: ಮಾದಕ ಪದಾರ್ಥ ಸೇವಿಸಿ ವಾಹನ ಚಲಾಯಿಸುವವರ ಚಾಲನ ಪರವಾನಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚನೆ ನೀಡಿದ್ದಾರೆ.
ರಸ್ತೆ ಸುರಕ್ಷೆ ಕುರಿತು ತಿರುವನಂತಪುರದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮದ್ಯ ಮತ್ತು ಮಾದಕ ದ್ರವ್ಯ ಸೇವಿಸಿದವರನ್ನು ಪತ್ತೆಹಚ್ಚಿ ಕಠಿನ ಕ್ರಮ ಕೈಗೊಳ್ಳಬೇಕು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು. ಹೆದ್ದಾರಿ ಗಸ್ತು ಬಲಪಡಿಸಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.
ಬೈಕ್ ಸ್ಟಂಟ್‌ಗೆ ತಡೆ: ಬೈಕ್ ಸ್ಟಂಟ್‌ಗಳನ್ನು ತಡೆಯಲು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಸೈಬರ್ ಗಸ್ತು ಬಲಪಡಿಸಬೇಕು. ಪುನರಾವರ್ತಿತ ಅಪರಾ ಧಿಗಳ ಚಾಲನ ಪರವಾನಿಗೆ ರದ್ದುಪಡಿಸಲು ಸಭೆಯಲ್ಲಿ ನಿರ್ದೇಶಿಸಲಾಗಿದೆ.