Advertisement

ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಪಿಣರಾಯಿ ವಿಜಯನ್ ಆಕ್ರೋಶ

09:21 PM Sep 19, 2022 | Team Udayavani |

ತಿರುವನಂತಪುರಂ: ನಿರಂತರವಾಗಿ ಟೀಕಾ ಪ್ರಹಾರ ನಡೆಸಿದ್ದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಾಗ್ದಾಳಿ ನಡೆಸಿದ್ದು, ಕಮ್ಯುನಿಸ್ಟ್ ವಿರೋಧಿ ಪ್ರಚಾರಕ ಎಂದು ಕರೆದಿದ್ದಾರೆ.

Advertisement

‘ಎಡಪಕ್ಷಗಳನ್ನು ಗುರಿಯಾಗಿಸುವ ವಿರೋಧ ಪಕ್ಷದ ರಾಜಕಾರಣಿಗಳ ಮಟ್ಟಕ್ಕೆ ಇಳಿಯಬೇಡಿ’ ಎಂದು ಪಿಣರಾಯಿ ವಿಜಯನ್ ಒತ್ತಾಯಿಸಿದರು.

ಇದನ್ನೂ ಓದಿ: ಯುಕೆಯಲ್ಲಿ ದೇವಾಲಯದ ಮೇಲಿನ ದಾಳಿ ಖಂಡಿಸಿದ ಭಾರತ ಹೈ ಕಮಿಷನ್

ರಾಜಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಲ್‌ಡಿಎಫ್ ಸರ್ಕಾರದ ವಿರುದ್ಧ ಖಾನ್ ವಾಗ್ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ, ಹಿರಿಯ ಸಿಪಿಐ(ಎಂ) ನಾಯಕ ವಿಜಯನ್, ‘ಆರಿಫ್ ಮೊಹಮ್ಮದ್ ಖಾನ್ ಆರ್‌ಎಸ್‌ಎಸ್‌ಗೆ ವಿಧೇಯತೆಯನ್ನು ತೋರಿಸುತ್ತಿದ್ದಾರೆ’ ಎಂದು ಆರೋಪಿಸಿ, ಕೇರಳ ಕಮ್ಯುನಿಸ್ಟ್ ಚಳವಳಿಯ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಹೇಳಿದರು.

‘1957ರಲ್ಲಿ ಮತದಾನದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಮ್ಯುನಿಸ್ಟರು ದಮನಕ್ಕೆ ಒಳಗಾಗಿದ್ದರು ಎಂಬುದನ್ನು ಅಂದಿನ ಕಮ್ಯುನಿಸ್ಟ್ ವಿರೋಧಿ ಪ್ರಚಾರಕ ಖಾನ್ ಅರ್ಥ ಮಾಡಿಕೊಳ್ಳಬೇಕು’ ಎಂದು ಪಕ್ಷದ ಕಾರ್ಯಕ್ರಮದಲ್ಲಿ ವಿಜಯನ್ ಹೇಳಿದರು.

Advertisement

‘ರಾಜ್ಯಪಾಲರ ಹುದ್ದೆಯು ಸಾಂವಿಧಾನಿಕ ಜವಾಬ್ದಾರಿಯಾಗಿದ್ದು, ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ಥಾನವಲ್ಲ’ ಎಂದು ವಿಜಯನ್ ಹೇಳಿದರು.

‘ಇಟಲಿಯಲ್ಲಿ ಚಾಲ್ತಿಯಲ್ಲಿರುವ ಫ್ಯಾಸಿಸಂ ಮತ್ತು ಕಮ್ಯುನಿಸಂ, ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ ಧರ್ಮದ ವಿರುದ್ಧ ಅಡಾಲ್ಫ್ ಹಿಟ್ಲರನ ದೃಷ್ಟಿಕೋನವನ್ನು ಆಧರಿಸಿ ಆರ್‌ಎಸ್‌ಎಸ್ ಸಿದ್ಧಾಂತ ಆಧರಿಸಿದೆ’ ಎಂದು ವಿಜಯನ್ ಆರೋಪಿಸಿದರು.

‘ಆಡಳಿತಾರೂಢ ಎಡರಂಗದ ಕಮ್ಯುನಿಸ್ಟ್ ಸಿದ್ಧಾಂತವನ್ನು ದೇಶದ ಹೊರಗಿನಿಂದ ಇಲ್ಲಿಗೆ ತರಲಾಗಿದೆ ಮತ್ತು ಇದು ಭಿನ್ನಾಭಿಪ್ರಾಯವನ್ನು ಮೌನಗೊಳಿಸಲು ಬಲಪ್ರಯೋಗಕ್ಕೆ ಅನುಮತಿ ನೀಡುತ್ತದೆ’ ಎಂದು ರಾಜ್ಯಪಾಲರು ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next