Advertisement

9 ಗಂಟೆವರೆಗೆ ತೊಂದರೆ ಕೊಡಲ್ಲ: ಒಪ್ಪಂದ ಪತ್ರಕ್ಕೆ ಪತ್ನಿ ಸಹಿ!

06:40 PM Nov 12, 2022 | Team Udayavani |

ಮದುವೆಯಾದ ಮೇಲೆ ಹೇಗಿರಬೇಕೆಂದು ನೀವೆಂದಾದರೂ ಮುಂಚಿತವಾಗಿಯೇ ಒಪ್ಪಂದ ಮಾಡಿಕೊಂಡಿದ್ದು ಇದೆಯಾ? ಕೇರಳದಲ್ಲೊಂದು ಪ್ರಕರಣ ನಡೆದಿದೆ. ಎಸ್‌.ಅರ್ಚನಾ ಎಂಬ ಯುವತಿ ರಘು ಎಸ್‌ ಕೆಡಿಆರ್‌ ಎಂಬ ವ್ಯಕ್ತಿಯನ್ನು ವಿವಾಹ ಮಾಡಿಕೊಳ್ಳುವಾಗ ಒಂದು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

Advertisement

“ಮದುವೆಯ ನಂತರ ನಾನು ರಾತ್ರಿ 9 ಗಂಟೆವರೆಗೆ ಪತಿಗೆ ಕರೆ ಮಾಡಿ ತೊಂದರೆ ಕೊಡುವುದಿಲ್ಲ. ಅಲ್ಲಿಯವರೆಗೆ ಪತಿ ತನ್ನ ಗೆಳೆಯರೊಂದಿಗೆ ಕಾಲ ಕಳೆಯಲು ಅವಕಾಶ ನೀಡುತ್ತೇನೆ’ ಎಂಬುದೇ ಈ ಒಪ್ಪಂದದಲ್ಲಿರುವ ಅಂಶ! ಅದು ಸಾಮಾಜಿಕ ತಾಣಗಳಲ್ಲೂ ಪ್ರಕಟವಾಗಿ ವೈರಲ್‌ ಆಗಿಬಿಟ್ಟಿದೆ.

ರಘು ಮೂಲತಃ ಬ್ಯಾಡ್ಮಿಂಟನ್‌ ಆಟಗಾರ.ಅವರು ಇನ್ನಿತರೆ ಆಟಗಾರರೊಂದಿಗೆ 17 ಮಂದಿಯಿರುವ ವಾಟ್ಸ್‌ಆ್ಯಪ್‌ ಗುಂಪು ಮಾಡಿಕೊಂಡಿದ್ದಾರೆ.

ಈ ಗುಂಪಿನ ಪ್ರತಿಯೊಬ್ಬರೂ ವಿವಾಹವಾಗುವಾಗ ಇಂತಹದ್ದೇನಾದರೂ ಮಾಡಿ ಸುದ್ದಿಯೆಬ್ಬಿಸುತ್ತಾರೆ. ಈ ಬಾರಿಯೂ ಅಂತಹದ್ದೇ ಒಂದು ಅಚ್ಚರಿ ನೀಡಿದ್ದಾರೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next