Advertisement
ಕೇರಳ ಮೂಲದ ಅನೂಪ್(32) ಬಂಧಿತ.ಆರೋಪಿಯಿಂದ 11 ಕೋಟಿ ರೂ. ಮೌಲ್ಯದ 11 ಕೆ.ಜಿ. ಹ್ಯಾಶಿಸ್ ಆಯಿಲ್ ಮತ್ತು 250 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ರೋಷನ್ ಸೇರಿ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
Related Articles
ರಸ್ತೆ ಮಾರ್ಗವಾಗಿ ನಗರಕ್ಕೆ ಬರುತ್ತಿದ್ದ ಡ್ರಗ್ಸ್‌ಗಳನ್ನು ಬೆಂಗಳೂರು, ಮಂಗಳೂರಿನಲ್ಲಿ ನಡೆಯುತ್ತಿದ್ದ ಹೈ-ಫೈ ಪಾರ್ಟಿಗಳಿಗೆ ಪೂರೈಕೆ ಮಾಡುತ್ತಿದ್ದರು.ಇತ್ತೀಚೆಗೆ ಹೆಬ್ಟಾಳ ಮೇಲು ಸೇತುವೆ ಬಸ್ ನಿಲ್ದಾಣದ ಬಳಿ ಅನೂಪ್ ಹ್ಯಾಶಿಸ್ ಮತ್ತು ಗಾಂಜಾ ತಂದು ಮಾರಾಟಕ್ಕೆ ಸಿದ್ದನಡೆಸಿದ್ದ. ಈ ಮಾಹಿತಿ ಸಂಗ್ರಹಿಸಿ ಹೆಡೆಕಾನ್‌ಸ್ಟೇಬಲ್ ಹಿರೇಮs… ಎಂಬವರು ಆರೋಪಿಯ ಮೇಲೆ ದಾಳಿ ನಡೆಸಿ ಮಾಲು ಸಮೇತ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ನಗರದ ಉದ್ಯಮಿಗಳಿಗೆ, ಸೆಲೆಬ್ರೆಟಿಗಳು ಹಾಗೂ ಇತರೆ ವರ್ಗದ ಗ್ರಾಹಕರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿರುವ ವಿಚಾರ ಬಯಲಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
Advertisement
ಇದನ್ನೂ ಓದಿ:ರಾಜ್ಯದಲ್ಲಿಂದು 399 ಕೋವಿಡ್ ಪಾಸಿಟಿವ್ ಪತ್ತೆ: 6 ಮಂದಿ ಸಾವು
ಬಾಣಸವಾಡಿ ಅಬಕಾರಿ ಠಾಣೆಯಲ್ಲಿ ಆರೋಪಿ ಅನೂಪ್ ಮತ್ತು ಆತನ ಸಹಚರರ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ, ನಗರದ ವಿವಿಧ ಪೊಲೀಸ್ ಠಾಣೆಗಳು ಮತ್ತು ಉಡುಪಿ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ರಾಜ್ಯದ ನಾನಾ ಜಿಲ್ಲೆಗಳ ಠಾಣೆಗಳ ವ್ಯಾಪ್ತಿಯಲ್ಲಿಯೂ ಡ್ರಗ್ಸ್ ಮಾರಾಟ ಮಾಡಿರುವುದು ಗೊತ್ತಾಗಿದೆ. ಕೆಲ ತಿಂಗಳ ಹಿಂದಷ್ಟೇ ಆರೋಪಿಗಳು ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದರು. ಇತ್ತೀಚೆಗಷ್ಟೇ ಜಾಮೀನು ಪಡೆದು ಬಿಡುಗಡೆಯಾಗಿ ಮತ್ತೆ ಅದೇ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ಹೇಳಿದರು.