Advertisement

ಶ್ರೇಷ್ಠ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳ ,ಅಹ್ಮದಾಬಾದ್‌ಗೆ ಸ್ಥಾನ

12:05 AM Jul 14, 2022 | Team Udayavani |

ಹೊಸದಿಲ್ಲಿ: ಟೈಮ್ಸ್‌ ನಿಯತಕಾಲಿಕೆಯು ಪಟ್ಟಿ ಮಾಡಿರುವ ವಿಶ್ವದ ಶ್ರೇಷ್ಠ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳ ಹಾಗೂ ಗುಜರಾತ್‌ನ ಅಹ್ಮದಾಬಾದ್‌ ಸ್ಥಾನಪಡೆದಿವೆ.

Advertisement

ಕೇರಳದಲ್ಲಿ ಪ್ರವಾಸೋದ್ಯಮ ಉಚ್ಛಾಯ ಮಟ್ಟಕ್ಕೇರಿ ರುವುದನ್ನು ಪಟ್ಟಿಯಲ್ಲಿ ಶ್ಲಾಘಿ ಸಿ ರುವ ಟೈಮ್ಸ್‌, ಭಾರತದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಕೇರಳವೂ ಒಂದಾಗಿದ್ದು, ಅದು ಮೋಟಾರ್‌ ಹೋಮ್‌ ಟೂರಿಸಂನ ತವರಾಗಿದೆ.

ಪ್ರವಾಸಿಗರನ್ನು ಆಕರ್ಷಿಸಲು ಪ್ರತಿ ವರ್ಷವೂ ಒಂದಿಲ್ಲೊಂದು ಹೊಸದಾದ, ಆಕರ್ಷಣೀಯ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಪ್ರಸಕ್ತ ವರ್ಷ, ಮೊಟ್ಟಮೊದಲ ಬಾರಿಗೆ “ಕಾರವಾನ್‌ ಮಿಡೋಸ್‌’ ಕ್ಯಾರವಾನ್‌ ಪಾರ್ಕ್‌ ನಿರ್ಮಾಣ ಮಾಡಲಾಗಿದೆ. ಪ್ರವಾಸಿಗರ ಸ್ವರ್ಗವಾಗಿಸಲು ಸರ್ವರೀತಿಯ ಪ್ರಯತ್ನಗಳು ಕೇರಳದಲ್ಲಿ ನಡೆದಿವೆ ಎಂದು ಶ್ಲಾಘಿಸಲಾಗಿದೆ.

ಅಹ್ಮದಾಬಾದ್‌ ಯುನೆಸ್ಕೋದಿಂದ ಅನುಮೋದಿಸಲ್ಪಟ್ಟ ಭಾರತದ ಮೊಟ್ಟಮೊದಲ ವಿಶ್ವ ಪಾರಂಪರಿಕ ನಗರವಾದ ಅಹ್ಮದಾಬಾದ್‌ನಲ್ಲಿ ಗಾಂಧಿ ಆಶ್ರಮ, ಸೈನ್ಸ್‌ ಸಿಟಿ ತುಂಬಾ ಪ್ರಮುಖವಾದವು. ಸೈನ್ಸ್‌ ಸಿಟಿಯಲ್ಲಿರುವ ವಿಶ್ವದ ಬೃಹತ್‌ ಅಂಡರ್‌ವಾಟರ್‌ ಅಕ್ವೇರಿಯಂ, ರೋಬೋಟ್‌ ಗ್ಯಾಲರಿಗಳು ಆಕರ್ಷಣೀಯ ಎಂದು ವರ್ಣಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next