Advertisement

ಕೇರಳದ ಮರಿಯಮ್‌ ಥ್ರೇಸಿಯಾಗೆ ಸಂತ ಪದವಿ

10:31 AM Oct 15, 2019 | Team Udayavani |

ವ್ಯಾಟಿಕನ್‌ ಸಿಟಿ: ಕೇರಳದ ಕ್ರೈಸ್ತ ಸನ್ಯಾಸಿನಿ ಮರಿಯಾಮ್‌ ಥ್ರೇಸಿಯಾ ಅವರಿಗೆ ಪೋಪ್‌ ಫ್ರಾನ್ಸಿಸ್‌ ಸಂತ ಪದವಿ ನೀಡಿ ಗೌರವಿಸಿದರು.

Advertisement

ವ್ಯಾಟಿಕನ್‌ ಸಿಟಿಯಲ್ಲಿ ರವಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು. ಮರಿಯಾಮ್‌ ಥ್ರೇಸಿಯಾ ತೃಶ್ಶೂರ್‌ನಲ್ಲಿ “ಕಾಂಗ್ರೆಗೇಷನ್‌ ಆಫ್ ದ ಸಿಸ್ಟರ್ಸ್‌ ಆಫ್ ದ ಹೋಲಿ ಫ್ಯಾಮಿಲಿ’ಯನ್ನು 1914 ರಲ್ಲಿ ಸಂಸ್ಥಾಪಿಸಿದ್ದರು. ಮರಿಯಾಮ್‌ 1926ರ ಜೂ. 26 ರಂದು 50ನೇ ವಯಸ್ಸಿನಲ್ಲಿ ನಿಧನಹೊಂದಿದರು. ಇದರಿಂದ ಕೇರಳದಲ್ಲಿರುವ ಶತಮಾನಗಳಷ್ಟು ಹಳೆಯದಾಗಿರುವ ಸೈರೋ - ಮಲಬಾರ್‌ ಚರ್ಚ್‌ನ ನಾಲ್ವರಿಗೆ ಸಂತ ಪದವಿ ಸಿಕ್ಕಿದಂತಾಗಿದೆ. 2008ರಲ್ಲಿ ಸಿಸ್ಟರ್‌ ಅಲೊ#àನ್ಸಾಗೆ ಸಂತ ಪದವಿ ನೀಡಲಾಗಿದ್ದರೆ, ಫಾದರ್‌ ಕುರಿಯಾಕೋಸ್‌ ಇಲಿಯಾಸ್‌ ಚವರ, ಸಿಸ್ಟರ್‌ ಯುಫ್ರಾಸಿಯಾ ಅವರಿಗೆ 2014ರಲ್ಲಿ ಸಂತ ಪದವಿ ನೀಡಲಾಗಿತ್ತು.

ಕೇಂದ್ರ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್‌ ನೇತೃತ್ವದ ಉನ್ನತ ಮಟ್ಟದ ನಿಯೋಗವು ಭಾರತವನ್ನು ಪ್ರತಿನಿಧಿಸಿ, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಮರಿಯಾಮ್‌ ಜತೆಗೆ ಇತರ ನಾಲ್ವರಿಗೂ ಸಂತ ಪದವಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next