Advertisement

ಕೇರಳ ಸರಕಾರದ ನಿರ್ಲಕ್ಷ್ಯ: ಜನ ಔಷಧಿ ಕಾರ್ಯಕ್ರಮ ವಿಫ‌ಲ: BJP

08:00 PM Aug 19, 2017 | Team Udayavani |

ತಿರುವನಂತಪುರ : ಜನರಿಗೆ ಅಗ್ಗದ ಬೆಲೆಯಲ್ಲಿ ಜೆನರಿಕ್‌ ಔಷಧಗಳನ್ನು ಪೂರೈಸುವ ಕೇಂದ್ರ ಸರಕಾರದ ಜನ ಔಷಧಿ ಕಾರ್ಯಕ್ರಮವನ್ನು ಕೇರಳ ಸರಕಾರ ವಿಫ‌ಲಗೊಳಿಸುತ್ತಿದೆ ಎಂದು ಕೇರಳ ಬಿಜೆಪಿ ಆರೋಪಿಸಿದೆ.

Advertisement

2008ರಷ್ಟು ಹಿಂದೆಯೇ ಆರಂಭಿಸಲ್ಪಟ್ಟಿದ್ದ ಜನ ಔಷಧಿ ಕಾರ್ಯಕ್ರಮದಡಿಯ ಸ್ಟೋರ್‌ಗಳನ್ನು ಜನಪ್ರಿಯಗೊಳಿಸುವ ಯಾವುದೇ ಕ್ರಮವನ್ನು ಕೇರಳ ಸರಕಾರ ಕೈಗೊಂಡಿಲ್ಲ; ಹಾಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಜನರಿಗೆ ಜೆನರಿಕ್‌ ಔಷಧಗಳ ಪೂರೈಕೆ ಆಗುತ್ತಿಲ್ಲ ಎಂದು ಇಂದಿಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಬಿಜೆಪಿ ರಾಜ್ಯ ಪ್ರದಾನ ಕಾರ್ಯದರ್ಶಿ ಎ ಎನ್‌ ರಾಧಾಕೃಷ್ಣ ಆರೋಪಿಸಿದರು. 

ಇದೇ ರೀತಿ ಕೇಂದ್ರದ ದೀನ್‌ ದಯಾಳ್‌ ಗ್ರಾಮೀಣ ಕೌಶಲ್ಯ ಯೋಜನೆ ಕೂಡ ಕೇರಳ ಸರಕಾರದ ನಿರ್ಲಕ್ಷ್ಯದಿಂದಾಗಿ ರಾಜ್ಯದಲ್ಲಿ ವಿಫ‌ಲವಾಗಿದೆ ಎಂದು ಅವರು ದೂರಿದರು. 

Advertisement

Udayavani is now on Telegram. Click here to join our channel and stay updated with the latest news.

Next