Advertisement

ಕೇಪುಪದವು-ಕೊಲ್ಲಪದವು ರಸ್ತೆ ಸ್ಥಿತಿ ಶೋಚನೀಯ

09:54 AM Sep 12, 2022 | Team Udayavani |

ವಿಟ್ಲ: ಕೇಪು ಗ್ರಾಮದ ಕೇಪುಪದವು- ಕೊಲ್ಲಪದವು ರಸ್ತೆಯ ಕೋಡಂದೂರು ಭಾಗದಲ್ಲಿ ಸ್ಥಿತಿ ಶೋಚ ನೀಯ ವಾಗಿದೆ. ವಾಹನ ಸಂಚರಿ ಸಲು ಅಸಾಧ್ಯವಾಗಿದೆ ಮತ್ತು ನಡೆದುಕೊಂಡು ಹೋಗಲೂ ಕಷ್ಟದ ಸ್ಥಿತಿಯಿದೆ. ಇದನ್ನು ತತ್‌ ಕ್ಷಣ ಅಭಿವೃದ್ಧಿ ಪಡಿಸಬೇಕೆಂದು ಈ ಭಾಗದ ಪರಿಶಿಷ್ಟ ಪಂಗಡದ ಕುಟುಂಬದವರು ಸೇರಿ ರಸ್ತೆ ಬಳಕೆದಾರರು ಆಗ್ರಹಿಸಿದ್ದಾರೆ.

Advertisement

ಸುಮಾರು 80 ವರ್ಷಗಳ ಹಿಂದೆಯೇ ಈ ರಸ್ತೆ ನಿರ್ಮಾಣವಾಗಿದೆ. ಪರಿಶಿಷ್ಟ ಪಂಗಡದ 70 ಕುಟುಂಬದವರು ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಸುಸಜ್ಜಿತವಾದ ರಸ್ತೆಯಿಲ್ಲದೆ ಇವರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳು ಇದೇ ರಸ್ತೆ ಮೂಲಕ ಶಾಲೆಗೆ ತೆರಳಬೇಕು. ಸ್ಥಳೀಯರು ಪೇಟೆಯನ್ನು ಸಂಪರ್ಕಿಸಲು ಕೂಡಾ ಈ ರಸ್ತೆಯೇ ಬೇಕು. ಅನಾರೋಗ್ಯದಿಂದ ಬಳಲಿದ ರೋಗಿಗಳನ್ನು ಈ ಮಾರ್ಗದಲ್ಲಿ ಒಯ್ಯಬೇಕಾದ ಸ್ಥಿತಿಯಿದೆ.

ಮನವಿ ಸಲ್ಲಿಕೆ ಸುಮಾರು 7 ಕಿ.ಮೀ. ದೂರದ ಈ ರಸ್ತೆ ಗುಡ್ಡಗಾಡು ಪ್ರದೇಶದಲ್ಲಿ ಸಾಗುತ್ತದೆ. ನಾಲ್ಕೈದು ಕಿ.ಮೀ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಗ್ರಾಮ ಪಂಚಾಯತ್ ಅನುದಾನ ಸಾಲುವುದಿಲ್ಲ. ಅದಕ್ಕಾಗಿ ಸ್ಥಳೀಯರು ಇತ್ತೀಚೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿ ಸಲ್ಲಿಸಿ ರಸ್ತೆ ಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.

ಅಭಿವೃದ್ಧಿಯ ನಿರೀಕ್ಷೆ: ಈ ರಸ್ತೆ ಅಭಿವೃದ್ಧಿಗೆ ಬೇಡಿಕೆಯನ್ನು ಸಲ್ಲಿಸಲಾಗಿದೆ. ಸಂಬಂಧಪಟ್ಟವರು ಗಮನಹರಿಸಿ, ಸೂಕ್ತ ಕ್ರಮಕೈಗೊಳ್ಳಬೇಕೆಂದು ವಿನಂತಿಸಿದ್ದೇವೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಗಮನಕ್ಕೆ ತರಲಾಗಿದೆ. ಆದಷ್ಟು ಶೀಘ್ರ ರಸ್ತೆ ಅಭಿವೃದ್ಧಿಯಾಗಬಹುದೆಂದು ನಿರೀಕ್ಷಿಸಿದ್ದೇವೆ. -ಶೇಖರ್‌ ಕೋಡಂದೂರು, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next