Advertisement

ಸ್ವಾತಂತ್ರ್ಯದ ಅಮೃತ ಮಹೋತ್ಸವ : ಗಂಗಾವತಿ ಕೇಂದ್ರೀಯ ಮಹಾವಿದ್ಯಾಲಯದಲ್ಲಿ ಧ್ವಜಾರೋಹಣವೇ ಇಲ್ಲ!

08:12 AM Aug 14, 2022 | Team Udayavani |

ಗಂಗಾವತಿ : ಈ ದೇಶದೆಲ್ಲೆದೆ 75 ಸ್ವಾತಂತ್ರದವರೆಗೆ ಎಲ್ಲಾ ಸರ್ಕಾರಿ ಅರೆಸರ್ಕಾರಿ ಮತ್ತು ರಾಷ್ಟ್ರ ಧ್ವಜ ಕಟ್ಟೆ ಇರುವ ಸ್ಥಳಗಳಲ್ಲಿ ಅಮೃತ ಮಹೋತ್ಸವದ ಸಡಗರದಲ್ಲಿ ಆ.13 ರಿಂದ 15 ರವರೆಗೆ ಪ್ರತಿದಿನ ಕಡ್ಡಾಯವಾಗಿ ರಾಷ್ಟ್ರಧ್ವಜಾರೋಹಣವನ್ನು ಬೆಳಿಗ್ಗೆ 6 ರಿಂದ 5.35 ಹೊರಗೆ ರಾಷ್ಟ್ರಧ್ವಜವನ್ನು ಆರೋಹಣ ಮಾಡಿ ನಂತರ ಅವರೋಹಣ ಮಾಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಗಂಗಾವತಿ ನಗರದ ಎಂಎನ್ ಎಂ ಬಾಲಕಿಯರ ಕಾಲೇಜು ಆವರಣದಲ್ಲಿರುವ ಕೇಂದ್ರೀಯ ಮಹಾವಿದ್ಯಾಲಯಕ್ಕೆ ಈ ಆದೇಶ ಅನ್ವಯವಾಗುವುದಿಲ್ಲವೇ ಪ್ರಶ್ನೆ ಮೂಡಿದೆ. ಕೇಂದ್ರೀಯ ವಿದ್ಯಾಲಯದ ಪಕ್ಕದಲ್ಲಿರುವ ಎಂಎನ್ ಎಂ ಬಾಲಕಿಯರ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜ್ ಲಯನ್ಸ್ ಕ್ಲಬ್ ಮತ್ತು ಉರ್ದು ಪ್ರೌಢಶಾಲೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಾಲೆಗಳಲ್ಲಿ ಆ.13 ಮತ್ತು 14 ರಂದು ಬೆಳಿಗ್ಗೆ 6 ಗಂಟೆಯಿಂದಲೇ ರಾಷ್ಟ್ರಧ್ವಜಾರೋಹಣ ಮಾಡಲಾಗಿದ್ದರೂ ಕೇಂದ್ರೀಯ ವಿದ್ಯಾಲಯಗಳು ಮಾತ್ರ ರಾಷ್ಟ್ರಧ್ವಜರೋಹಣ ಮಾಡಿಲ್ಲ. ಜೊತೆಗೆ ಆ.13 ರಂದು ಮತ್ತು 14 ರಂದು ದೇಶಾದ್ಯಂತ ರಾಷ್ಟ್ರಧ್ವಜವನ್ನು ಏರಿಸುವ ಮೂಲಕ ದೇಶ ಭಕ್ತಿಯನ್ನು ಮೆರೆದಿದ್ದಾರೆ .

Advertisement

ಆದರೆ ಗಂಗಾವತಿಯ ಕೇಂದ್ರೀಯ ವಿದ್ಯಾಲಯ ಇದಕ್ಕೆ ವಿರುದ್ಧವಾಗಿದೆ . ಈ ಶಾಲೆಯಲ್ಲಿ ಆ.13 ಮತ್ತು 14 ರಂದು ರವಿವಾರ ಬೆಳಿಗ್ಗೆ 8 ಗಂಟೆಯವರೆಗೂ ರಾಷ್ಟ್ರಧ್ವಜಾರೋಹಣ ಮಾಡಿರಲಿಲ್ಲ . ಈ ಕುರಿತು ಪಾಲಕರು ಆಕ್ರೋಶ ವ್ಯಕ್ತಪಡಿಸಿ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ .

ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಕೇಂದ್ರೀಯ ಮಹಾವಿದ್ಯಾಲಯ ಪ್ರತಿನಿತ್ಯವೂ ರಾಷ್ಟ್ರಧ್ವಜಾರೋಹಣವನ್ನು ಮಾಡುತ್ತದೆ ಶನಿವಾರ ರವಿವಾರ ರಜೆ ಇರುವಾಗ ರಾಷ್ಟ್ರ ಧ್ವಜಾರೋಹಣ ಮಾಡುವುದಿಲ್ಲ .

ಶನಿವಾರ ಕ್ರೀಡಾಕೂಟದ ತಯಾರಿಯಲ್ಲಿದ್ದರಿಂದ ಅದರಲ್ಲಿ ಬ್ಯುಸಿ ಆಗಿದ್ದು ಒತ್ತಡದಿಂದ ತಪ್ಪಾಗಿದ್ದು ರವಿವಾರ ರಾಷ್ಟ್ರ ಧ್ವಜಾರೋಹಣ ಮಾಡುವುದಾಗಿ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ರಂಗಪ್ಪ ತಿಳಿಸಿದ್ದಾರೆ .

ಇದನ್ನೂ ಓದಿ : ಯುಪಿ ದೋಣಿ ದುರಂತ : ಮತ್ತೆ 3 ಮೃತದೇಹಗಳು ಪತ್ತೆ, ಮೃತರ ಸಂಖ್ಯೆ 12ಕ್ಕೆ ಏರಿಕೆ

Advertisement

ಯಾವುದೇ ಕಾರ್ಯ ಒತ್ತಡದಿಂದ ಇದ್ದರೂ ಸಹ ರಾಷ್ಟ್ರಧ್ವಜವನ್ನು ಅಮೃತ ಮಹೋತ್ಸವದ ನಿಮಿತ್ತ 3 ದಿನಗಳ ಕಾಲ ಕಡ್ಡಾಯವಾಗಿ ಆರೋಹಣ ಮಾಡಿ ಸಂಜೆ ಅವರೋಹಣ ಮಾಡು ವಂತೆ ಸರಕಾರ ಸೂಚನೆ ನೀಡಿದ್ದರೂ ಗಂಗಾವತಿಯ ಕೇಂದ್ರೀಯ ವಿದ್ಯಾಲಯದಲ್ಲಿ ಈ ಸರ್ಕಾರದ ಆದೇಶವನ್ನು ನಿರ್ಲಕ್ಷ್ಯ ಮಾಡಲಾಗಿದೆ .

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಬಿಎಸ್ಎನ್ಎಲ್, ಎಲ್ಲೈಸಿ ಬ್ಯಾಂಕುಗಳು, ಅಂಚೆ ಕಚೇರಿ ಸೇರಿದಂತೆ ಎಲ್ಲಾ ಶಾಲಾ ಕಾಲೇಜು ಮತ್ತು ಸರ್ಕಾರಿ ಕಟ್ಟಡಗಳು ಅರೆ ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರ ಧ್ವಜವನ್ನು ಆ 13 ರಿಂದ 3 ದಿನಗಳ ಕಾಲ ರಾಷ್ಟ್ರ ಧ್ವಜಾರೋಹಣ ಮಾಡಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ .

ಕಡ್ಡಾಯವಾಗಿ ಎಲ್ಲ ಸರ್ಕಾರಿ ಅರೆ ಸರ್ಕಾರಿ ಶಾಲೆಗಳಲ್ಲಿ ರಾಷ್ಟ್ರಧ್ವಜ ಮಾಡಬೇಕು ಇಲ್ಲದಿದ್ದರೆ ಕಾನೂನು ಕ್ರಮ:ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ಯ ಸರ್ಕಾರದ ಸುತ್ತೋಲೆ ಪ್ರಕಾರ ಕಡ್ಡಾಯವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸರ್ಕಾರಿ ಕಚೇರಿಗಳು ಶಾಲಾ ಕಾಲೇಜು ಸಂಸ್ಥೆಗಳೂ ಅರೆಸರ್ಕಾರಿ ಸಂಸ್ಥೆಗಳು ಸಹ ಕಡ್ಡಾಯವಾಗಿ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ ಬೇಕು. ಆದೇಶವನ್ನು ಉಲ್ಲಂಘಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮತ್ತು ಗಂಗಾವತಿಯ ಕೇಂದ್ರೀಯ ವಿದ್ಯಾಲಯದ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ತಹಸೀಲ್ದಾರ್ ಯು. ನಾಗರಾಜ್ ಉದಯವಾಣಿ ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next