Advertisement

ಕೆಂಪೇಗೌಡರ ದೂರದೃಷ್ಟಿ ಆದರ್ಶ: ಕಳಸದ

06:31 PM Jun 29, 2022 | Nagendra Trasi |

ವಿಜಯಪುರ: ವಿಶ್ವದ ಪ್ರತಿಯೊಬ್ಬರನ್ನು ಆಕರ್ಷಿಸುವ ಕರ್ನಾಟಕದ ರಾಜಧಾನಿ ಬೆಂಗಳೂರು ನಗರ ಜಾಗತಿಕ ಮಟ್ಟದಲ್ಲಿ ಹೆಸರಾಗಿದೆ. ಅಂತಹದ್ದೊಂದು ವಿಶೇಷ ಹೆಗ್ಗಳಿಕೆ ಪಾತ್ರವಾಗಿರುವ ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡ ಅವರ ದೂರದೃಷ್ಟಿ ಮತ್ತು ವಿಚಾರಧಾರೆ ಇಂದಿಗೂ ಆದರ್ಶನೀಯ ಎಂದು ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಹೇಳಿದರು.

Advertisement

ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆಂಪೇಗೌಡ ಅವರು ಬೆಂಗಳೂರು ಸೇರಿದಂತೆ ವಿವಿಧೆಡೆ ಆಡಳಿತ ನಡೆಸಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ಆಲೋಚನೆಗಳು ಇಂದಿಗೂ ಪ್ರಸ್ತುತವಾಗಿವೆ. ಕೆಂಪೇಗೌಡ ಅವರು ಮಹೋನ್ನತ ದೂರದೃಷ್ಟಿ ಹೊಂದಿದ್ದರಿಂದ ಬೆಂಗಳೂರು ನಗರದಲ್ಲಿ ಇಂದಿಗೂ ಸಹ ಅನೇಕ ಕೆರೆಗಳ ಸಂರಕ್ಷಣೆ ಸಾಧ್ಯವಾಗಿದೆ. ಎಷ್ಟೇ ಜನಸಂದಣಿ ಇದ್ದರೂ ಎಲ್ಲರಿಗೂ ಅನುಕೂಲವಾಗುವ ಹಾಗೆ ನಗರವನ್ನು ನಿರ್ಮಿಸಿ ಇಡಿ ವಿಶ್ವಕ್ಕೆ ಮಾದರಿಯಾಗುವ ಹಾಗೆ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು.

ಸಿಂದಗಿ ಎಸ್‌ಜಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಆರ್‌. ಹೆಗ್ಗನದೊಡ್ಡಿ ಮಾತನಾಡಿ, ಶಾಂತಿಗೆ ಹೆಸರಾದ ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ ಅವರು ಸರ್ವ ಸಮುದಾಯದ ಜನರನ್ನು ಒಗ್ಗೂಡಿಸಿ ಮುನ್ನಡೆಸಿದರು. ಜಾತ್ಯತೀತ ಮನೋಭಾವ ಹೊಂದಿದ್ದರು. ಹೋರಾಟದ ಗುಣಗಳನ್ನು ಮೈಗೂಡಿಸಿಕೊಂಡಿದ್ದರು.

ವೈಜ್ಞಾನಿಕ ಹಿನ್ನೆಲೆಯಲ್ಲಿ ಬೆಂಗಳೂರ ನಗರವನ್ನು ನಿರ್ಮಿಸಿದ್ದರಿಂದ ಬೆಂಗಳೂರು ನಗರ ಸುಂದರವಾಗಿ ನಿರ್ಮಾಣಗೊಂಡಿದೆ. ನಾಡಿನ ಹಿತಕ್ಕಾಗಿ ಶ್ರಮಿಸಿದ ಅವರ ಯೋಚನೆಗಳು, ಯೋಜನೆಗಳು ನಮಗೆಲ್ಲರಿಗೂ ಮಾದರಿಯಾಗಿವೆ ಎಂದರು.

Advertisement

ಡಿಎಸ್ಪಿ ಲಕ್ಷ್ಮೀನಾರಾಯಣ, ವಿವಿಧ ಸಂಘಟನೆ, ಸಮುದಾಯಗಳ ಪ್ರಮುಖರಾದ ರತ್ನಾ ಸಂಗಟಿ, ರವಿಗೌಡ ಬಿರಾದಾರ, ನೀಲೇಶಗೌಡ ಭೂಸನೂರ, ಕೃಷ್ಣಾ ಜಾಧವ, ಅಂಬಾಜಿರಾವ್‌ ಪವಾರ, ಜಹೀರಸಾಬ್‌ ತೊನಶ್ಯಾಳ, ಶರಣಗೌಡ ಹರವಾಳ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ, ಗಿರೀಶ ಕುಲಕರ್ಣಿ, ಸಂಕೇತಗೌಡ ಬ್ಯಾಕೋಡ, ಎ.ಬಿ.ಅಲ್ಲಾಪುರ ಸೇರಿದಂತೆ ಇತರರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಸ್ವಾಗತಿಸಿದರು. ವಿಶಾಲಾಕ್ಷಿ ಬಡಿಗೇರ ಸುಗಮ ಸಂಗೀತ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೂ ಮುನ್ನ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಕೆಂಪೇಗೌಡ ಭಾವಚಿತ್ರದ ಮೆರವಣಿಗೆಗೆ ಎಡಿಸಿ ರಮೇಶ ಕಳಸದ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next