Advertisement
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾಭವನದಲ್ಲಿ ಆಯೋಜಿಸಿದ್ದ ನಾಡ ಪ್ರಭು ಕೆಂಪೇಗೌಡ ಜಯಂತಿಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನೀಕರಣ, ನಗರೀಕರಣಕ್ಕೆ ಮಾರು ಹೋಗಿ ಕೆಂಪೇಗೌಡರ ಕಲ್ಪನೆಯನ್ನು ಅಳಿಸುವ ನಿಟ್ಟಿನಲ್ಲಿ ಮನುಷ್ಯ ಪರಿಸರ ನಾಶಕ್ಕೆ ಮುಂದಾಗುತ್ತಿದ್ದಾನೆ ಎಂದರು.
Related Articles
Advertisement
ನಾಡ ಪ್ರಭು ಕೆಂಪೇಗೌಡ ಅವರ ಜೀವನ ವೃತ್ತಾಂತದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಮೈಸೂರು ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಮಳಲಿ ವಸಂತ್ ಕುಮಾರ್ ಅವರು, ಕೆಂಪೇಗೌಡರ ಪೂರ್ವಿಕ ರಣಭೈರೇಗೌಡ ಕಂಚಿಯವರು. ಆಗ ಕಂಚಿಯೂ ಕನ್ನಡ ನಾಡಾಗಿತ್ತು. ಚೋಳರ ಆಳ್ವಿಕೆಯಿಂದ ಬೇಸತ್ತು ಅಲ್ಲಿಂದ ಬೆಂಗಳೂರಿಗೆ ಬಂದು ಯಲಹಂಕದಲ್ಲಿ ನೆಲಸಿದ ರಣಭೈರೇಗೌಡರ ಪುತ್ರಲ್ಲೊಬ್ಬರಾದ ಕೆಂಪನಂಜೇಗೌಡ ಅವರ ಮಗ ಕೆಂಪೇಗೌಡ ಎಂದು ತಿಳಿಸಿದರು.
ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ರಾಜೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ಗೌಡ ಅವರು ಕೆಂಪೇ ಗೌಡರ ಕುರಿತು ಮಾತನಾಡಿದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ,ಅಪರ ಜಿಲ್ಲಾಧಿಕಾರಿ ಎಂ.ಎಲ್ ವೈಶಾಲಿ, ಜಿಲ್ಲಾ ಕಸಾಪ ಅಧ್ಯಕ್ಷ ಮಂಜೇಗೌಡ, ಹಾಸನ ತಾಲೂಕು ಪಂಚಾಯಿತಿ ಅಧ್ಯಕ್ಷ ನಿಂಗೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಎನ್. ಕುಂಬಾರ, ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಅವರು ನಾಡಪ್ರಭು ಕೆಂಪೇಗೌಡರ ಕುರಿತ ಪುಸ್ತಕ ಬಿಡುಗಡೆ ಮಾಡಿ ದರು. ಹಾಸನ ಜಿಲ್ಲಾ ನಾಡ ಪ್ರಭು ಕೆಂಪೇಗೌಡ ರಂಗಭೂಮಿ ಕಲಾವಿದರಿಂದ ಪ್ರದರ್ಶಿತವಾದ ಪಾಂಡವರ ಸಂಗ್ರಾಮ ಎಂಬ ಪೌರಾಣಿಕ ನಾಟಕ ಪ್ರೇಕ್ಷಕರ ಮನ ರಂಜಿಸಿತು.