Advertisement

ಕಸದ ವಾಹನದಲ್ಲಿ ಕೆಂಪೇಗೌಡರ ಭಾವಚಿತ್ರ ಮೆರವಣಿಗೆ: ಉಗ್ರ ಹೋರಾಟದ ಎಚ್ಚರಿಕೆ

04:07 PM Jun 27, 2022 | Team Udayavani |

ಕುಣಿಗಲ್ : ಪುರಸಭೆಯ ಕಸದ ವಾಹನದಲ್ಲಿ ನಾಡಪ್ರಭು ಕೆಂಪೇಗೌಡ ಪೋಟೋ ಇಟ್ಟು ಮೇರವಣಿಗೆ ಮಾಡಿದನ್ನು ತೀವ್ರವಾಗಿ‌ ಖಂಡಿಸಿದ ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ಆಡಳಿತ ಸ್ಪಷ್ಟನೇ ನೀಡಿ, ಕ್ಷೇಮೆ ಕೇಳದಿದ್ದರೇ ಬುಧವಾರ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

Advertisement

ಪಟ್ಟಣದ ಪ್ರವಾಸಿ‌ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಾಡಪ್ರಭು ಕೆಂಪೇಗೌಡರು 16ನೇ ಶತಮಾನದಲ್ಲಿಯೇ ದೂರದೃಷ್ಟಿಯಿಂದ ಸುಂದರ ಬೆಂಗಳೂರು ನಗರವನ್ನು ನಿರ್ಮಿಸಿದ್ದಾರೆ. ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆದಿರುವ ಬೆಂಗಳೂರು ನಗರ ನಿರ್ಮಾಣಕ್ಕೆ ಕಾರಣರಾದವರು ನಾಡಪ್ರಭು ಕೆಂಪೇಗೌಡರು. ಅವರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡಿ ಸರ್ವರಿಗೂ ನೀರಾವರಿ ಸೌಲಭ್ಯವನ್ನು ಕಲ್ಪಿಸಿದ ರಾಜ್ಯ ಕಂಡ ಧೀಮಂತ  ನಾಯಕರಾಗಿದ್ದರು. ಇಂತಹ ನಾಯಕರನ್ನು ತಾಲೂಕು ಆಡಳಿತ, ಪುರಸಭೆ ಹಾಗೂ ಶಾಸಕರು ಉದ್ದೇಶ ಪೂರಕವಾಗಿ ಅಪಮಾನ ಮಾಡಬೇಕೆಂಬ ಉದ್ದೇಶದಿಂದ ಪುರಸಭೆಯ ಕಸದ ವಾಹನದಲ್ಲಿ ಕೆಂಪೇಗೌಡರ ಭಾವಚಿತ್ರ ಇಟ್ಟು ಮೆರವಣಿಗೆ ಮಾಡಿದ್ದಾರೆ, ತಾಲೂಕು ಆಡಳಿತಕ್ಕೆ ಹಣದ ಕೊರತೆ ಇದ್ದೀದರೇ ದಾನಿಗಳು ಸಹಾಯ ಮಾಡುತ್ತಿದ್ದರು ದಾನಿಗಳ ಸಹಾಯ ಪಡೆದು ಆಚರಣೆ ಮಾಡಬಹುದ್ದಾಗಿತ್ತು ಎಂದು ಕಿಡಿಕಾರಿದರು.

ಕೆಂಪೇಗೌಡ ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿ ತಾಲೂಕು ಆಡಳಿತ ಎಲ್ಲಾ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ಮಾಡಬೇಕು ಆದರೇ ಏಕ ಪಕ್ಷೀಯವಾಗಿ ಕಾರ್ಯಕ್ರಮ ಮಾಡಿದೆ ಎಂದು ದೂರಿದರು, ವಿದ್ಯಾವಂತ ಶಾಸಕರು ಇರುವಾಗ ಕ್ಷೇತ್ರದಲ್ಲಿ ಮಹಾನ್ ನಾಯಕರಿಗೆ ಅಪಮಾನ ಮಾಡಿರುವುದು ನಾವು ಸಹಿಸಲು ಆಗುವುದಿಲ್ಲ, ‌ತಾಲೂಕು ಆಡಳಿತ ಈ ಸಂಬಂದ ಸ್ಪಷ್ಟನೇ ಹಾಗೂ ಬಹಿರಂಗ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಜೂ 29 ತಾಲೂಕು ಕಚೇರಿ, ಪುರಸಭೆ ಹಾಗೂ ಶಾಸಕರಿಗೆ ಮುತ್ತಿಗೆ ಹಾಕಲಾಗುವುದೆಂದು ಹೇಳಿದರು.

ಇದನ್ನೂ ಓದಿ : ಪ್ರಧಾನಿ ಮೋದಿಯಿಂದ ಕೆಂಪೇಗೌಡರ ಪ್ರತಿಮೆ ಉದ್ಘಾಟನೆ: ಸಿಎಂ ಬೊಮ್ಮಾಯಿ

ಗೋಷ್ಠಿಯಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಕೆ.ಎಲ್ ಹರೀಶ್, ಸದಸ್ಯ ಈ ಮಂಜು, ಗ್ರಾ.ಪಂ ಅಧ್ಯಕ್ಷ ಕೃಷ್ಣಮೂರ್ತಿ, ಮಾಜಿ ಉಪಾಧ್ಯಕ್ಷ ಸಿ.ಶಿವಕುಮಾರ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ದೇವರಾಜ್ , ಕಾಂಗ್ರೆಸ್ ಯುವ ಮುಖಂಡ ಬಾಬು ಸೇರಿದಂತೆ  ವಿವಿಧ ಸಮುದಾಯದ ಜನರು ಭಾಗವಹಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next