Advertisement

ಸುಧಾಕರ್‌ರಿಂದ ಕಳಪೆ ರಾಜಕಾರಣ

04:24 PM Jun 28, 2022 | Team Udayavani |

ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯದಲ್ಲಿ ಜಾತ್ಯತೀತವಾಗಿ ಆಡಳಿತ ನಡೆಸಿ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ಜನ್ಮದಿನದಂದು ಸಚಿವ ಸುಧಾಕರ್‌ ಹುಟ್ಟುಹಬ್ಬ ಆಚರಣೆ ಖಂಡನೀಯ ಎಂದು ಕೆಪಿಸಿಸಿ ಸದಸ್ಯ ವಿನಯ್‌ ಎನ್‌ ಶ್ಯಾಮ್‌ ಹೇಳಿದರು.

Advertisement

ನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಆಶ್ರಯದಲ್ಲಿ ನಡೆದ 513ನೇ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಐತಿಹಾಸಿಕ ಸಾಧನೆಗಳನ್ನು ಮಾಡಿರುವ ಕೆಂಪೇಗೌಡ ಅವರಂತಹ ಮಹಾನ್‌ ವ್ಯಕ್ತಿ ಹುಟ್ಟಿದ ಸಂದರ್ಭದಲ್ಲಿ ಸಚಿವ ಡಾ.ಕೆ.ಸುಧಾಕರ್‌ ಅವರು ಜನ್ಮದಿನ ಆಚರಿಸಿಕೊಂಡು ಕಳಪೆಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದ ಅವರು ಮೊದಲು ಪಕ್ಷವನ್ನು ಬದಲಾಯಿಸಿದರು ಇದೀಗ ಹುಟ್ಟಿ ದಿನವನ್ನು ಬದಲಾಯಿಸಿ ಜನ್ಮದಿನ ಮಾಡಿಕೊಳ್ಳುತ್ತಿದ್ದಾರೆ ಮುಂದೆ ಜನರನ್ನು ಮಾರಾಟ ಮಾಡಲು ಇವರು ಹಿಂದೆ ಮುಂದೆ ನೋಡುವುದಿಲ್ಲವೆಂದು ವ್ಯಂಗ್ಯವಾಡಿದರು.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅನೇಕ ರೀತಿಯ ಸಮಸ್ಯೆಗಳಿವೆ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಸಚಿವ ಡಾ.ಕೆ.ಸುಧಾಕರ್‌ ಅವರು ಗಮನಹರಿಸಲಿ, ಅದನ್ನು ಬಿಟ್ಟು ಕೇವಲ ತೋರ್ಪಡಿಕೆ ರಾಜಕಾರಣ ಮಾಡಬಾರದು. ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಿ ಜನ ಶಾಶ್ವತವಾಗಿ ಮೆಚ್ಚಿಕೊಳ್ಳುವಂತಹ ಕೆಲಸವನ್ನು ಮಾಡಲಿ ಕಳಪೆಮಟ್ಟದ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ನಡೆದ ಕೆಂಪೇಗೌಡ ಅವರ ಜಯಂತಿ ಕಾರ್ಯಕ್ರಮದಲ್ಲಿ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್‌, ಕೆಪಿಸಿಸಿ ಸದಸ್ಯ ಮುನೇಗೌಡ,ಕಾಂಗ್ರೆಸ್‌ ಹಿರಿಯ ಮುಖಂಡ ವಕೀಲ ನಾರಾಯಣಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಯರಾಂ, ಜಿಲ್ಲಾ ಕಾಂಗ್ರೆಸ್‌ ಸೇವಾದಳದ ಅಧ್ಯಕ್ಷ ಹನುಮಂತಪ್ಪ, ಕಿಸಾನ್‌ ಕಾಂಗ್ರೆಸ್‌ನ ಕೃಷ್ಣಪ್ಪ, ಮೈನಾರಿಟಿ ಘಟಕದ ಅಧ್ಯಕ್ಷ ಸಮೀಉಲ್ಲಾ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next