ಕೆಮ್ಮಣ್ಣು: ಶತಮಾನೋತ್ಸವ ಸಂಭ್ರಮದಲ್ಲಿರುವ ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ ʼಶತಾಭಿವಂದನಂʼ ಸಮಾರೋಪ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಸೊಸೈಟಿಯ ಪ್ರಧಾನ ಕಚೇರಿಯಲ್ಲಿನ ಖಂಡಿಗೆ ರಾಜಗೋಪಾಲ ಭಟ್ ಸಭಾಂಗಣದಲ್ಲಿ ವಾಗ್ಮೀ, ಸಾಮಾಜಿಕ ಚಿಂತಕ ದಾಮೋದರ ಶರ್ಮ ಬಾರ್ಕೂರು ಹಾಗೂ ಮುಂಬೈಯ ಉದ್ಯಮಿ ಬಿ.ರಮಾನಂದ ರಾವ್ ದಂಪತಿಗಳು ಅ.11ರ ಶುಕ್ರವಾರ ಬಿಡುಗಡೆಗೊಳಿಸಿದರು.
ನೂರು ವರ್ಷಗಳ ಹಿಂದೆ ಹಿಂದೂ, ಮುಸ್ಲಿಂ ಮಹನೀಯರಿಬ್ಬರಿಂದ ಪ್ರಾರಂಭಿಸಲ್ಪಟ್ಟು ಸೊಸೈಟಿಯ ಶತಮಾನೋತ್ಸವ ಸಂದರ್ಭದಲ್ಲಿ ಶತಾಯುಷಿ ಕ್ರಿಶ್ಚಿಯನ್ ಮಹಿಳೆಯನ್ನು ಗುರುತಿಸಿ, ಸನ್ಮಾನಿಸಿ, ʼಶತಾಭಿವಂದನಂʼ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಪುಣ್ಯದ ಕ್ಷಣವೆಂದರು.
ಹಿರಿಯ ಚೇತನಗಳನ್ನು ನೆನಪಿಸಿ ಪ್ರದಾನ ಕಚೇರಿಗೆ ಸ್ಥಳದಾನ ಮಾಡಿದ ಮಹಾದಾನಿ ಖಂಡಿಗೆ ರಾಜಗೋಪಾಲ ಭಟ್ ಅವರ ಮಗಳಾದ ಲಕ್ಷ್ಮೀ ಹಾಗೂ ಅಳಿಯ ಬಿ.ರಮಾನಂದ ರಾವ್ ಅವರು ಈ ಸಂದರ್ಭದಲ್ಲಿ ಭಾಗವಹಿಸಿರುವುದು ಸಮಯೋಚಿತವೆಂದು ಹೇಳಿದರು.
ಸಂತೆಕಟ್ಟೆ, ಕರಾವಳಿ ಕೆಡ್ರಿಟ್ ಕೋ. ಅಪರೇಟಿವ್ ಸೊಟೈಟಿ ಅಧ್ಯಕ್ಷ, ಗ್ರಾಹಕ ಉಮೇಶ್ ಶೆಟ್ಟಿ ಶುಭ ಹಾರೈಸಿದರು.
ಸಂಘದ ನಿವೃತ್ತ ಮುಖ್ಯ ನಿರ್ವಹಣಾಧಿಕಾರಿ ತೇಜಪ್ಪ ಅಮೀನ್, ಉಪಾಧ್ಯಕ್ಷ ಬಿ. ಅಫ್ಜಲ್ ಸಾಹೇಬ್ ಉಪಸ್ಥಿತರಿದ್ದರು. ಗಣಪತಿ ವ್ಯವಸ್ಥಾಪಕ ಸಂಘದ ಅಧ್ಯಕ್ಷ ಟಿ.ಸತೀಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಪ್ರಸ್ತಾವಿಸಿ, ಸ್ವಾಗತಿಸಿದರು.
ನಿರ್ದೇಶಕರಾದ ನಾರಾಯಣ ಬಂಗೇರ, ಟಿ. ಗೋಪಾಲಕೃಷ್ಣ ಹೆಗ್ಡೆ, ಹ್ಯೂಬರ್ಟ್ ಸಂತಾನ್ ಲೂವಿಸ್, ರಾಘವೇಂದ್ರ ಪ್ರಸಾದ್, ಉಮೇಶ್ ಅಮೀನ್, ಪುರುಷೋತ್ತಮ್ ಸಾಲ್ಯಾನ್, ಶ್ಯಾಮ್ ಎನ್., ಹರೀಶ್ ಶೆಟ್ಟಿ, ಲೇನಿ ಫೆರ್ನಾಂಡೀಸ್, ಲತಾ ಪಿ. ರಾವ್, ಲಕ್ಷ್ಮೀ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಸಾಲ್ಯಾನ್ ವಂದಿಸಿ, ಸತೀಶ್ವಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.