Advertisement

ಬಾಂಗ್ಲಾದೇಶ ವಿರುದ್ಧ ವಿಂಡೀಸ್‌ ಗೆ 7 ವಿಕೆಟ್‌ ವಿಕ್ಟರಿ

07:05 PM Jun 20, 2022 | Team Udayavani |

ನಾರ್ತ್‌ ಸೌಂಡ್‌ (ಆಂಟಿಗಾ): ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.

Advertisement

ವೆಸ್ಟ್‌ ಇಂಡೀಸ್‌ ಜಯಕ್ಕೆ 84 ರನ್ನುಗಳ ಸುಲಭ ಗುರಿ ಲಭಿಸಿತ್ತು. ಆದರೆ 3 ವಿಕೆಟ್‌ಗಳನ್ನು 9 ರನ್‌ ಮಾಡುವಷ್ಟರಲ್ಲಿ ಕಳೆದುಕೊಂಡು ಆತಂಕಕ್ಕೆ ಒಳಗಾಯಿತು. 4ನೇ ವಿಕೆಟಿಗೆ ಜತೆಗೂಡಿದ ಜಾನ್‌ ಕ್ಯಾಂಬೆಲ್‌ (ಅಜೇಯ 58) ಮತ್ತು ಜರ್ಮೈನ್‌ ಬ್ಲ್ಯಾಕ್‌ವುಡ್‌ (ಅಜೇಯ 26) ತಂಡಕ್ಕೆ ಹೆಚ್ಚಿನ ಹಾನಿ ಆಗದಂತೆ ತಡೆದರು. 22 ಓವರ್‌ಗಳಲ್ಲಿ 3 ವಿಕೆಟಿಗೆ 88 ರನ್‌ ಬಾರಿಸಿ ಗೆದ್ದು ಬಂದಿತು. ಒಟ್ಟು 7 ವಿಕೆಟ್‌ ಉರುಳಿಸಿದ ವೇಗಿ ಕೆಮರ್‌ ರೋಚ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸರಣಿಯ ದ್ವಿತೀಯ ಟೆಸ್ಟ್‌ ಜೂ. 24ರಂದು ಗ್ರಾಸ್‌ ಐಲೆಟ್‌ನಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ-103 ಮತ್ತು 245. ವೆಸ್ಟ್‌ ಇಂಡೀಸ್‌-265 ಮತ್ತು 3 ವಿಕೆಟಿಗೆ 88. ಪಂದ್ಯಶ್ರೇಷ್ಠ: ಕೆಮರ್‌ ರೋಚ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next