Advertisement

ಒಮಿಕ್ರಾನ್ ಭೀತಿ ; ವಿಮಾನ ಸಂಚಾರ ಸ್ಥಗಿತಗೊಳಿಸಲು ಪ್ರಧಾನಿಗೆ ಕೇಜ್ರಿವಾಲ್ ಮನವಿ

01:33 PM Nov 27, 2021 | Team Udayavani |

ನವದೆಹಲಿ : ಕೋವಿಡ್ ಹೊಸ ರೂಪಾಂತರದಿಂದ ಪ್ರಭಾವಿತವಾಗಿರುವ ದೇಶಗಳಿಂದ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

Advertisement

ಪ್ರಧಾನ ಮಂತ್ರಿಯವರನ್ನು ಒತ್ತಾಯಿಸಿ ಕೇಜ್ರಿವಾಲ್ ಅವರು ಟ್ವೀಟ್ ಮಾಡಿದ್ದು, ಬಹಳ ಕಷ್ಟಪಟ್ಟು ನಮ್ಮ ದೇಶ ಕೊರೊನಾದಿಂದ ಚೇತರಿಸಿಕೊಂಡಿದೆ. ಈ ಹೊಸ ರೂಪಾಂತರವನ್ನು ಭಾರತಕ್ಕೆ ಪ್ರವೇಶಿಸುವುದನ್ನು ತಡೆಯಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡಬೇಕಾಗಿದೆ ಎಂದು ಬರೆದಿದ್ದಾರೆ.

ಇದನ್ನೂ ಓದಿ : ಒಮಿಕ್ರಾನ್ ಭೀತಿ; ಕೋವಿಡ್ ಸೋಂಕು ದಿಢೀರ್ ಹೆಚ್ಚಳ, ತುರ್ತುಪರಿಸ್ಥಿತಿ ಘೋಷಿಸಿದ ನ್ಯೂಯಾರ್ಕ್

ದಕ್ಷಿಣ ಆಫ್ರಿಕಾದಲ್ಲಿ ಮಾರಣಾಂತಿಕ ಒಮಿಕ್ರಾನ್ ವೈರಾಣು ಪತ್ತೆಯಾಗಿರುವ ಹಿನ್ನಲೆಯಲ್ಲಿ ಅಮೆರಿಕಾ ಸೇರಿದಂತೆ ಜಗತ್ತಿನ ಹೆಚ್ಚಿನ ದೇಶಗಳು ಕೆಟ್ಟೆಚ್ಚರ ವಹಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next