Advertisement

ದಿಲ್ಲಿ ಸಂಪುಟಕ್ಕೆ ಆತಿಶಿ ಸೇರ್ಪಡೆಗೆ ಶಿಫಾರಸು: ಲೆ|ಗ|ಸಕ್ಸೇನಾಗೆ ಸಿಎಂ ಕೇಜ್ರಿ ಪ್ರಸ್ತಾವನೆ

01:04 AM Mar 02, 2023 | Team Udayavani |

ಹೊಸದಿಲ್ಲಿ: ದಿಲ್ಲಿಯ ಆಪ್‌ ಸರಕಾರದಲ್ಲಿ ಪ್ರಮುಖ ಸಚಿವರಾಗಿದ್ದ ಮನೀಶ್‌ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್‌ ಅವರ ರಾಜೀನಾಮೆಯಿಂದ ತೆರವಾಗಿರುವ 2 ಸ್ಥಾನಗಳಿಗೆ ನೇಮಕ ಮಾಡಲು ಸಿಎಂ ಅರವಿಂದ ಕೇಜ್ರಿವಾಲ್‌ ಮುಂದಾಗಿದ್ದಾರೆ.

Advertisement

ಶಾಸಕರಾಗಿರುವ ಆತಿಶಿ ಮಲೇìನಾ, ಸೌರಭ್‌ ಭಾರದ್ವಾಜ್‌ ಅವರನ್ನು ಸಚಿವ ಸ್ಥಾನಕ್ಕೆ ನೇಮಿಸುವ ಬಗ್ಗೆ ಅರವಿಂದ ಕೇಜ್ರಿವಾಲ್‌ ಲೆಫ್ಟಿನೆಂಟ್‌ ಗವರ್ನರ್‌ಗೆ ಶಿಫಾರಸು ಮಾಡಿದ್ದಾರೆ. ಆತಿಶಿ ಅವರು ಕೇಜ್ರಿವಾಲ್‌ ಸಂಪುಟದ ಮೊದಲ ಮಹಿಳಾ ಸಚಿವೆಯೂ ಆಗಲಿದ್ದಾರೆ. ಆದರೆ, ನಂ.2 ಸ್ಥಾನದಲ್ಲಿ ಇದ್ದ ಸಿಸೋಡಿಯಾ ಅವರು ಹೊಂದಿದ್ದ ಉಪಮುಖ್ಯಮಂತ್ರಿ ಹುದ್ದೆಗೆ ನೇಮಕ ಮಾಡುವ ಬಗ್ಗೆ ಯಾವ ನಿರ್ಧಾರವನ್ನೂ ಕೇಜ್ರಿವಾಲ್‌ ಪ್ರಕಟಿಸಿಲ್ಲ.

ಸೌರಭ್‌ ಭಾರದ್ವಾಜ್‌ ಆಪ್‌ನ ರಾಷ್ಟ್ರೀಯ ವಕ್ತಾರ ಹಾಗೂ ದಿಲ್ಲಿ ಜಲ ಮಂಡಳಿಯ ಉಪಾಧ್ಯಕ್ಷ. ಗ್ರೇಟರ್‌ ಕೈಲಾಶ್‌ ಕ್ಷೇತ್ರದ ಶಾಸಕರಾಗಿರುವ ಇವರು, ಆಪ್‌ ಸರಕಾರದ ಮೊದಲ ಅವಧಿಯಲ್ಲಿ ಸಚಿವರಾ ಗಿದ್ದರು. ಕಲ್ಕಾಜಿ ಕ್ಷೇತ್ರದ ಶಾಸಕಿಯಾಗಿರುವ ಆತಿಶಿ ಮಲೇìನಾ ಅವರು ಸಿಸೋಡಿಯಾ ಅವರ ಶೈಕ್ಷಣಿಕ ತಂಡದ ಪ್ರಮುಖರಾಗಿದ್ದಾರೆ. 2019ರ ಚುನಾವಣೆಯಲ್ಲಿ ಪೂರ್ವ ದಿಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ಕ್ರಿಕೆಟರ್‌ ಗೌತಮ್‌ ಗಂಭೀರ್‌ ಎದುರು ಸೋತಿದ್ದರು.
ಸೌರಭ್‌, ಆತಿಶಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸು ವವರೆಗೂ, ಸಚಿವ ಕೈಲಾಶ್‌ ಗೆಹೊÉàಟ್‌ ಅವರಿಗೆ ಹೆಚ್ಚುವರಿ ಯಾಗಿ ಹಣಕಾಸು, ಲೋಕೋಪಯೋಗಿ ಹಾಗೂ ಕೆಲವು ಖಾತೆಗಳನ್ನು ನೀಡಲಾಗಿದೆ.

ಸಚಿವ ರಾಜಕುಮಾರ್‌ ಆನಂದ್‌ ಅವರಿಗೆ ಹೆಚ್ಚುವರಿಯಾಗಿ ಸಮಾಜ ಕಲ್ಯಾಣ, ಶಿಕ್ಷಣ, ಆರೋಗ್ಯ ಮತ್ತು ಇತರ ಖಾತೆಗಳ ಹೆಚ್ಚುವರಿ ಹೊಣೆಯನ್ನು ಈಗಾಗಲೇ ನೀಡಲಾಗಿದೆ.

ಇದೇ ವೇಳೆ, ಕಾಂಗ್ರೆಸ್‌ ಮುಖಂಡರು ಆಪ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಿಎಂ ಕೇಜ್ರಿವಾಲ್‌ ಭಾಗಿಯಾಗಿ ರುವುದರಿಂದ ಅವರು ರಾಜೀನಾಮೆ ನೀಡ ಬೇಕೆಂದು ಒತ್ತಾಯಿಸಿದ್ದಾರೆ.

Advertisement

ದಿಲ್ಲಿಯಲ್ಲಿ ಆಪ್‌ ಸರಕಾರ ದಿಂದ ನಡೆಯುತ್ತಿರುವ ಒಳ್ಳೆಯ ಕೆಲಸಗಳನ್ನು ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನೀಶ್‌ ಸಿಸೋಡಿಯಾ ಅವರ ಬಂಧನವಾಗಿದೆ. ಅವರು ಬಿಜೆಪಿ ಸೇರಿದರೆ ನಾಳೆಯೇ ಬಂಧಮುಕ್ತವಾಗಲಿದ್ದಾರೆ.
-ಅರವಿಂದ ಕೇಜ್ರಿವಾಲ್‌, ದಿಲ್ಲಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next