Advertisement

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

12:47 PM Mar 29, 2024 | Team Udayavani |

ನನ್ನನ್ನು ಬಂಧಿಸಿ ಆಪ್‌ ಮುಗಿಸುವುದೇ ಇ.ಡಿ. ಗುರಿ: ಕೋರ್ಟ್‌ನ ಮುಂದೆ ಸ್ವತಃ ಕೇಜ್ರಿವಾಲ್‌ ವಾದ

Advertisement

ಆಪ್‌ ಲಂಚ ಪಡೆದಿದ್ದಕ್ಕೆ ಸಾಕ್ಷಿ ಇದೆ, ಕೇಜ್ರಿ ಡಿಜಿಟಲ್‌ ಸಾಧನಗಳ ಪಾಸ್‌ವರ್ಡ್‌ ಕೊಡುತ್ತಿಲ್ಲ: ಇ.ಡಿ.

ಹೊಸದಿಲ್ಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಇ.ಡಿ. ವಶ ದ ಅವಧಿ ಯನ್ನು ಎಪ್ರಿಲ್‌ 1ರ ವರೆಗೂ ನ್ಯಾಯಾ ಲಯ ಗುರುವಾರ ವಿಸ್ತರಿಸಿದೆ. ಜಾರಿ ನಿರ್ದೇ ಶಾನಲಯ(ಇ.ಡಿ.), ಮತ್ತೆ 7 ದಿನ ಕೇಜ್ರಿವಾಲರನ್ನು ತಮ್ಮ ವಶಕ್ಕೆ ನೀಡುವಂತೆ ಕೇಳಿಕೊಂಡಿತ್ತು. ಆದರೆ 4 ದಿನಗಳ ಕಾಲ ಇ.ಡಿ. ವಶಕ್ಕೆ ನೀಡಿದ ರೋಸ್‌ ಅವೆನ್ಯೂ ಕೋರ್ಟ್‌, ಎ. 1ರಂದು ಬೆಳಗ್ಗೆ 11 ಗಂಟೆಗೆ ಕೋರ್ಟ್‌ ಮುಂದೆ ಹಾಜರುಪಡಿಸಬೇಕು ಎಂದು ಹೇಳಿದೆ.

ವಿಚಾರಣೆ ವೇಳೆ ಕೇಜ್ರಿವಾಲ್‌ ತಪ್ಪಿಸಿ ಕೊಳ್ಳುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಗರ ಣದ ಹಣವನ್ನು ಗೋವಾ ಚುನಾವಣೆಗೆ ಬಳಸಿಕೊಳ್ಳಲಾಗಿದ್ದು, ಈ ಕುರಿತು ಆಪ್‌ ಅಭ್ಯರ್ಥಿಗಳ ಹೇಳಿಕೆಯನ್ನು ಪಡೆಯ ಲಾಗುತ್ತಿದೆ. ಹಾಗಾಗಿ ಹೆಚ್ಚಿನ ವಿಚಾರಣೆಗೆ ಕೇಜ್ರಿವಾಲ್‌ ಅವರನ್ನು ಇ.ಡಿ ವಶಕ್ಕೆ ನೀಡಬೇ ಕೆಂದು ಇ.ಡಿ. ಪರ ವಕೀಲರು ವಾದ ಮಂಡಿ ಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್‌ ಪರ ವಕೀಲರು, ಈ ಪ್ರಕರಣದಲ್ಲಿ 100 ಕೋಟಿ ರೂ. ಹಗರಣ ನಡೆದೇ ಇಲ್ಲ. ಹಣದ ವಿಚಾ ರಣೆ ಕೂಡ ದಾಖಲಾಗಿಲ್ಲ. ಕೇವಲ 4 ಬಾರಿ ಹೆಸರು ಪ್ರಸ್ತಾವವಾಗಿದ್ದಕ್ಕೆ ಬಂಧಿಸಲಾಗಿದೆ ಎಂದು ಕೇಜ್ರಿವಾಲ್‌ ಪರ ವಕೀಲರು ಹೇಳಿದರು.

ಗುರುವಾರ(ಮಾ.28)ಕ್ಕೆ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇ.ಡಿ. ಕೇಜ್ರಿವಾಲರನ್ನು ನ್ಯಾಯಾಧೀಶೆ ಕಾವೇರಿ ಬವೇಜಾ ಎದುರು ಹಾಜರು ಪಡಿಸಿತ್ತು. ಕೇಜ್ರಿವಾಲ್‌ ಪರ ಹಿರಿಯ ನ್ಯಾಯವಾದಿ ರಮೇಶ್‌ ಗುಪ್ತಾ ಹಾಗೂ ಇ.ಡಿ. ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನ ರಲ್‌ ಎಸ್‌.ವಿ.ರಾಜು ಅವರು ಹಾಜರಾ ಗಿದ್ದರು. ಸ್ವಲ್ಪ ಹೊತ್ತು ಕೇಜ್ರಿವಾಲ್‌ ಕೂಡ ಸ್ವತಃ ವಾದ ಮಂಡಿಸಿದ್ದು ಕಂಡುಬಂತು.

Advertisement

ಗೋವಾ ಆಪ್‌ ನಾಯಕರ ವಿಚಾರಣೆ

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇ.ಡಿ.) ಗುರುವಾರ ಗೋವಾ ಆಪ್‌ ಘಟಕದ ಅಧ್ಯಕ್ಷ ಅಮಿತ್‌ ಪಾಳೇಕರ್‌ ಹಾಗೂ ಇತರ ಮೂವರನ್ನು ವಿಚಾರಣೆ ಗೊಳಪಡಿಸಿದೆ. ಪಾಳೇಕರ್‌ ಜತೆಗೆ ಆಪ್‌ ನಾಯಕ ರಾಮರಾವ್‌ ವಾಘ್‌ ಮತ್ತು ಇತರ ಇಬ್ಬರಿಗೆ ಇ.ಡಿ. ಸಮನ್ಸ್‌ ನೀಡಿತ್ತು. ಕೇಜ್ರಿವಾಲ್‌ ಸೇರಿದಂತೆ ಇತರರು ಬಂಧಿತರಾಗಿರುವ ದಿಲ್ಲಿ ಅಬಕಾರಿ ನೀತಿ ಹಗರಣ ಸಂಬಂಧ ಇವರನ್ನು ವಿಚಾರಣೆ ನಡೆಸಲಾಗಿದೆ.

ಕೇಜ್ರಿಗೆ ಕಿರುಕುಳ: ಪತ್ನಿ ಸುನೀತಾ ಆರೋಪ

ಕೇಜ್ರಿವಾಲ್‌ ಆರೋಗ್ಯ ಸರಿಯಿಲ್ಲ. ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅವರ ಪತ್ನಿ ಸುನೀತಾ ಕೇಜ್ರಿವಾಲ್‌ ಆರೋಪಿಸಿದ್ದಾರೆ. ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಆಗಮಿಸಿದ್ದ ಸುನೀತಾ ಅವರು, ಕೇಜ್ರಿವಾಲ್‌ ಆರೋಗ್ಯ ಸರಿಯಿಲ್ಲ. ಅವರ ದೇಹ ದಲ್ಲಿ ಸಕ್ಕರೆ ಅಂಶ ಹೆಚ್ಚು ಕಡಿಮೆಯಾಗುತ್ತಿದೆ. ಅವರಿಗೆ ಸಾಕಷ್ಟು ಕಿರುಕುಳ ನೀಡಲಾಗುತ್ತಿದೆ. ಈ ದೌರ್ಜನ್ಯ ನಿಲ್ಲುವಂತೆ ಕಾಣುತ್ತಿಲ್ಲ. ಜನರು ತಕ್ಕ ಉತ್ತರ ನೀಡಲಿದ್ದಾರೆಂದು ಹೇಳಿದರು.

ಭಾರತದ ಕಟು ಆಕ್ಷೇಪಕ್ಕೆ ಮೆತ್ತಗಾದ ಜರ್ಮನಿ, ಅಮೆರಿಕ

ಕೇಜ್ರಿವಾಲ್‌ ಬಂಧನ ಸಂಬಂಧ ಅನಾವಶ್ಯಕವಾಗಿ ಭಾರತದ ವ್ಯವಹಾರದಲ್ಲಿ ಮೂಗು ತೂರಿಸಿದ್ದ ಜರ್ಮನಿ ಈಗ ತನ್ನ ಮಾತಿನ ಧಾಟಿಯನ್ನು ಬದಲಿಸಿದೆ. ಭಾರತೀಯ ಸಂವಿಧಾನವು ಮಾನವನ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕೆ ಖಾತ್ರಿ ಒದಗಿಸುತ್ತದೆ. ಏಷ್ಯಾದಲ್ಲಿ ಪ್ರಮುಖ ಪಾಲುದಾರ ರಾಷ್ಟ್ರವಾಗಿರುವ ಭಾರತ ಹಾಗೂ ನಾವು ಒಂದೇ ತೆರನಾದ ಮೌಲ್ಯಗಳನ್ನು ಹಂಚಿಕೊಳ್ಳುತ್ತೇವೆ ಎಂದು ಜರ್ಮನಿ ವಿದೇಶಾಂಗ ವಕ್ತಾರರು ತಿಳಿಸಿದ್ದಾರೆ.

ಭಾರತವು ಜರ್ಮನಿ ವಿದೇಶಾಂಗ ವಕ್ತಾರರಿಗೆ ಸಮನ್ಸ್‌ ನೀಡಿ, ಪ್ರತಿರೋಧ ಸಲ್ಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದೇ ವೇಳೆ ಕೇಜ್ರಿವಾಲ್‌ ಬಂಧನ ಸಂಬಂಧ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತವು ಅಮೆರಿಕದ ಹಿರಿಯ ಅಧಿಕಾರಿಯನ್ನು ಕರೆಯಿಸಿಕೊಂಡು ತನ್ನ ವಿರೋಧವನ್ನು ದಾಖಲಿಸಿತ್ತು. ಆ ಬಳಿಕ ಅಮೆರಿಕ ಕೂಡ, ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇದೆ ಎಂದು ಹೇಳಿದೆ.

ಸಿಎಂ ಸ್ಥಾನದಿಂದ ಕೆಳಗಿಳಿಸುವಂತೆ ಕೋರಿದ್ದ ಪಿಐಎಲ್‌ ವಜಾ

ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌)ಯನ್ನು ದೆಹಲಿ ಹೈಕೋರ್ಟ್‌ ವಜಾ ಮಾಡಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್‌ ನೇತೃತ್ವದ ಪೀಠವು, ಇದು ನ್ಯಾಯಾಲಯಕ್ಕೆ ಸಂಬಂಧಿಸಿದ ಕೆಲಸವಲ್ಲ. ಶಾಸಕಾಂಗದ ವ್ಯವಹಾರಗಳಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿತು.

ಕೇಜ್ರಿವಾಲ್‌ ವಾದ ಏನು?

●4 ಬಾರಿ ಸಾಕ್ಷಿಗಳು ನನ್ನ ಹೆಸರು ಹೇಳಿದ್ದಕ್ಕೆ ಹಾಲಿ ಸಿಎಂರನ್ನು ಬಂಧಿಸಬಹುದೇ?

●ಇದು 100 ಕೋಟಿ ರೂ. ಹಗರಣ ಎನ್ನುತ್ತಿದ್ದಾರೆ. 2 ವರ್ಷದಿಂದ ಈ ಕೇಸಿನ ತನಿಖೆ ನಡೆಯುತ್ತಿದೆ. ಹಗರಣದಿಂದ ಬಂದ ಹಣ ಎಲ್ಲಿದೆ?

● ಮಾಫಿ ಸಾಕ್ಷಿಯಾಗಿ ಬದಲಾಗಿರುವ ಶರತ್‌ ರೆಡ್ಡಿ 55 ಕೋಟಿ ರೂ. ಹಣವನ್ನು ಬಿಜೆಪಿಗೆ ನೀಡಿದ್ದಾನೆ. ಇದಕ್ಕೆ ಸಾಕ್ಷಿ ಇದೆ.

●ಸಿಬಿಐ 31,000 ಪುಟ ಮತ್ತು ಇ.ಡಿ. 25,000 ಪುಟಗಳ ಚಾರ್ಜ್‌ಶೀಟ್‌ ಹಾಕಿದೆ. ಈವರೆಗೂ ಯಾವುದೇ ಕೋರ್ಟ್‌ ನನ್ನನ್ನು ತಪ್ಪಿತಸ್ಥನೆಂದು ಹೇಳಿಲ್ಲ. ಆದರೂ ಬಂಧಿಸಲಾಗಿದೆ.

ಇ.ಡಿ. ಪ್ರತಿವಾದವೇನು?

● ವಿಚಾರಣೆ ವೇಳೆ ಕೇಜ್ರಿವಾಲ್‌ ಅವರು ತಪ್ಪಿಸಿಕೊಳ್ಳುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಡಿಜಿ ಟಲ್‌ ಸಾಧ ನ ಗಳ ಪಾಸ್‌ ವರ್ಡ್‌ ಕೂಡ ನೀಡುತ್ತಿಲ್ಲ.

● ಇತರ ವ್ಯಕ್ತಿಗಳ ಮುಂದೆ ಅವರನ್ನು ಕೂರಿಸಿ ವಿಚಾರಿಸ ಬೇಕಿದೆ. ಈ ಸಂಬಂಧ ಆಪ್‌ ಅಭ್ಯರ್ಥಿಗಳ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ.

● ಇ.ಡಿ.ಯ ಬಳಿ ಎಷ್ಟು ದಾಖಲೆಗಳಿವೆ ಎಂದು ಕೇಜ್ರಿವಾಲ್‌ಗೆ ಹೇಗೆ ಗೊತ್ತು? ಇದೆಲ್ಲವೂ ಅವರ ಕಲ್ಪನೆಯಷ್ಟೇ.

●ಆಪ್‌ ಕಿಕ್‌ ಬ್ಯಾಕ್‌ ಪಡೆದಿದ್ದು, ಅದನ್ನು ಗೋವಾ ಚುನಾವಣೆ ಯಲ್ಲಿ ಬಳಸಿದೆ. ಹವಾಲಾ ಮೂಲಕ ಹಣ ಬಂದಿರುವ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next