Advertisement

“ಯೂ ಟರ್ನ್’ಹೊಡೆಯುವುದರಲ್ಲಿ ಕೇಜ್ರಿವಾಲ್‌ ನಿಸ್ಸೀಮ: ತೇಜಸ್ವಿ ಸೂರ್ಯ

09:38 PM Sep 03, 2022 | Team Udayavani |

ಅಹಮದಾಬಾದ್‌: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ “ಯೂ ಟರ್ನ್’ ಹೊಡೆಯುವುದರಲ್ಲಿ ದೇಶದಲ್ಲೇ ನಿಸ್ಸೀಮ ನಾಯಕ. ಅವರ ಉಚಿತ ಯೋಜನೆಗಳಿಗೆ ಗುಜರಾತ್‌ನ ಯುವ ಮತದಾರರು ಮಾರು ಹೋಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ವಾಗ್ಧಾಳಿ ನಡೆಸಿದ್ದಾರೆ.

Advertisement

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಕೇಜ್ರಿವಾಲ್‌ರದ್ದು ವಿಶ್ವಾಸಾರ್ಹತೆ ಮತ್ತು ದೃಢತೆ ಇಲ್ಲದ ರಾಜಕಾರಣ. ಮನೀಶ್‌ ಸಿಸೋಡಿಯಾ ಅವರ ಬಂಧನವು ಕೇಜ್ರಿವಾಲ್‌ ಹೇಳುವ ಶುದ್ಧ ರಾಜಕಾರಣದ ಶವಪೆಟ್ಟಿಗೆಯ ಕೊನೆಯ ಮೊಳೆಯಾಗಿದೆ,” ಎಂದು ದೂರಿದರು.

“ದೆಹಲಿಯಲ್ಲಿ ಆಪ್‌ ನೇತೃತ್ವದ ಸರ್ಕಾರದ ದುರಾಡಳಿತವನ್ನು ಬಿಜೆಪಿ ಬಹಿರಂಗಪಡಿಸಿದೆ. ಕಳೆದ 30 ವರ್ಷಗಳಿಂದ ಗುಜರಾತ್‌ ಅಭಿವೃದ್ಧಿಯ ಹಾದಿಯಲ್ಲಿದ್ದು, ಇಲ್ಲಿನ ಯುವಕರು ಇದನ್ನು ತೀವ್ರಗತಿಯಲ್ಲಿ ಮುಂದುವರಿಸಲು ಬಯಸಿದ್ದಾರೆ,” ಎಂದು ತೇಜಸ್ವಿ ಹೇಳಿದರು.

ಬಿಜೆಪಿಯಿಂದ ಹಣ ಪಡೆಯಿರಿ, ಆಪ್‌ಗೆ ಕೆಲಸ ಮಾಡಿ: ಕೇಜ್ರಿವಾಲ್‌
“ಬಿಜೆಪಿ ಕಾರ್ಯಕರ್ತರು ಬಿಜೆಪಿಯಿಂದ ಹಣ ಪಡೆಯಿರಿ. ಆದರೆ ಆಪ್‌ಗಾಗಿ ಕೆಲಸ ಮಾಡಿ,” ಎಂದು ದೆಹಲಿ ಸಿಎಂ ಕೇಜ್ರಿವಾಲ್‌ ಹೇಳಿದರು. ರಾಜ್‌ಕೋಟ್‌ನಲ್ಲಿ ಎರಡು ದಿನಗಳ ಮನೆ ಮನೆ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಅವರು, “ಬಿಜೆಪಿ ಕಾರ್ಯಕರ್ತರು ಕೇಸರಿ ಪಕ್ಷದಲ್ಲೇ ಉಳಿಯಿರಿ. ಆದರೆ ಆಪ್‌ಗಾಗಿ ದುಡಿಯಿರಿ,” ಎಂದು ಉಚಿತ ಆಫ‌ರ್‌ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next